ಕೊರೋನ ಆತಂಕ: ಹೋಳಿಯಲ್ಲಿ ಪಾಲ್ಗೊಳ್ಳದಿರಲು ಮೋದಿ ನಿರ್ಧಾರ
ಹೊಸದಿಲ್ಲಿ,ಮಾ.4: ನೊವೆಲ್ ಕೊರೋನ ವೈರಸ್ ಸೋಂಕಿನ ಪ್ರಕರಣಗಳು ದೇಶದ ವಿವಿಧೆಡೆ ವರದಿಯಾಗಿರುವಂತೆಯೇ, ಈ ವರ್ಷದ ಹೋಳಿ ಹಬ್ಬದ ಉತ್ಸವದಲ್ಲಿ ತಾನು ಪಾಲ್ಗೊಳ್ಳುವುದಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ತಿಳಿಸಿದ್ದಾರೆ.
"ಕೋವಿಡ್-19, ಕೊರೋನವೈರಸ್ ಹರಡುವ ಹಿನ್ನೆಲೆಯಲ್ಲಿ ಜನರು ಗುಂಪಾಗಿ ಸೇರುವುದನ್ನು ಕಡಿಮೆಗೊಳಿಸಬೇಕೆಂದು ಜಗತ್ತಿನಾದ್ಯಂತದ ತಜ್ಞರು ಕರೆ ನೀಡಿದ್ದಾರೆ’’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ‘‘ ಹೀಗಾಗಿ, ಈ ವರ್ಷ ಯಾವುದೇಹೋಲಿ ಮಿಲನ್ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಲು ತಾನು ನಿರ್ಧರಿಸಿದ್ದೇನೆ’’ ಎಂದು ಅವರು ಟ್ವೀಟಿಸಿದ್ದಾರೆ.
ಈ ಮಧ್ಯೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ದಿಲ್ಲಿ ಸರಕಾರದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
Next Story