ಟ್ರಂಪ್ಗೆ ಕೊರೋನವೈರಸ್ ಪರೀಕ್ಷೆ; ಸೋಂಕು ಇಲ್ಲ
ವಾಶಿಂಗ್ಟನ್, ಮಾ. 15: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೋನವೈರಸ್ ಪರೀಕ್ಷೆಗೆ ಒಳಗಾಗಿದ್ದು, ಅವರಲ್ಲಿ ಸೋಂಕು ಇಲ್ಲ ಎಂದು ಪರೀಕ್ಷಾ ವರದಿ ತಿಳಿಸಿದೆ. ಕೊರೋನವೈರಸ್ ಸೋಂಕಿಗೆ ಗುರಿಯಾಗಿರುವವರ ಸಂಪರ್ಕಕ್ಕೆ ಟ್ರಂಪ್ ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು ಎಂದು ಅವರ ವೈದ್ಯ ಸಿಯಾನ್ ಕಾನ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಬ್ರೆಝಿಲ್ ಅಧ್ಯಕ್ಷರ ನಿಯೋಗದ ಹಲವು ಸದಸ್ಯರು ಅಮೆರಿಕ ಅಧ್ಯಕ್ಷರ ಫ್ಲೋರಿಡ ರಿಸಾರ್ಟ್ಗೆ ಭೇಟಿ ನೀಡಿದ್ದರು ಹಾಗೂ ಅವರೊಂದಿಗೆ 73 ವರ್ಷದ ಟ್ರಂಪ್ ಮಾತುಕತೆ ನಡೆಸಿದ್ದರು. ಆ ಬಳಿಕ, ಬ್ರೆಝಿಲ್ ಅಧ್ಯಕ್ಷರ ನಿಯೋಗದ ಹಲವು ಸದಸ್ಯರಲ್ಲಿ ಕೊರೋನವೈರಸ್ ಸೋಂಕು ಇರುವುದು ಪತ್ತೆಯಾಗಿತ್ತು.
ಅಮೆರಿಕದಲ್ಲಿ ಕೊರೋನವೈರಸ್ ದಾಳಿಗೆ ಈವರೆಗೆ ಕನಿಷ್ಠ 51 ಮಂದಿ ಬಲಿಯಾಗಿದ್ದಾರೆ ಹಾಗೂ ದೇಶಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.
Next Story