ಕೊರೊನಾವೈರಸ್: ಕೊರತೆ ನೀಗಿಸಲು ಕೈದಿಗಳಿಂದ ಫೇಸ್ ಮಾಸ್ಕ್ ತಯಾರಿಸುತ್ತಿರುವ ಕೇರಳ ಸರಕಾರ
ಸಾಮಾಜಿಕ ಜಾಲತಾಣ ಬಳಕೆದಾರರಿಂದ ಶ್ಲಾಘನೆ
ಹೊಸದಿಲ್ಲಿ: ಕೊರೊನಾವೈರಸ್ ಸೋಂಕಿನ ಹಲವು ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಅವುಗಳ ಪೂರೈಕೆಯಲ್ಲಾಗಿರುವ ವ್ಯತ್ಯಯವನ್ನು ಮನಗಂಡಿರುವ ಕೇರಳ ಸರಕಾರ ರಾಜ್ಯದ ಕಾರಾಗೃಹಗಳಲ್ಲಿರುವ ಕೈದಿಗಳ ಮೂಲಕ ಫೇಸ್ ಮಾಸ್ಕ್ ತಯಾರಿಗೆ ಆದೇಶಿಸಿದೆ.
ಈಗಾಗಲೇ ಈ ರೀತಿ ತಿರುವನಂತಪುರಂನಲ್ಲಿನ ಕಾರಾಗೃಹದಲ್ಲಿನ ಕೈದಿಗಳು ತಯಾರಿಸಿದ ಮೊದಲ ಬ್ಯಾಚ್ ಮಾಸ್ಕ್ ಗಳ ಚಿತ್ರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶೇರ್ ಮಾಡಿ ಟ್ವೀಟ್ ಮಾಡಿದ್ದಾರೆ. ಕೇರಳ ಸರಕಾರದ ಈ ಕ್ರಮಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
Keeping the ideologies apart,
— Engineer 2.0 (@iamkumar001) March 15, 2020
U are doing a great job ...
Other states must follow it .
Kudos to you and your entire team for wonderful work against Coronavirus outbreak
— Rishi (@SunoRishi) March 14, 2020
This is called thinking outside the box.
— Jills Daniel ജിൽസ് ഡാനിയേൽ (@jillsdaniel) March 15, 2020
Great initiative
Next Story