ಮೂವರು ಶಾಹೀನ್ಬಾಗ್ ಪ್ರತಿಭಟನೆಕಾರರಿಗೆ ಜಾಮೀನು
ಹೊಸದಿಲ್ಲಿ, ಮಾ. 30: ದೇಶಾದ್ಯಂತ ಜಾರಿಯಾಗಿರುವ ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿ ಶಾಹೀನ್ಬಾಗ್ನಲ್ಲಿ ಜಮಾಯಿಸಿದ್ದ ಆರೋಪ ಎದ್ದುರಿಸುತ್ತಿರುವ ಮೂವರು ಸಿಎಎ ಪ್ರತಿಭಟನೆಕಾರರಿಗೆ ದಿಲ್ಲಿ ನ್ಯಾಯಾಲಯ ಜಾಮೀನು ನೀಡಿದೆ.
ಸೈಯದ್ ಅಹ್ಮದ್, ಶಾನ್ ಮುಹಮ್ಮದ್ ಮತ್ತು ಸೈಯದ್ ಮಸೂದ್ ಅಹ್ಮದ್ ಎಂಬವರಿಗೆ ದಿಲ್ಲಿ ನ್ಯಾಯಾಲಯ ಜಾಮೀನು ನೀಡಿದೆ.
ಕೊರೋನ ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ಹೇರಲಾದ ಕರ್ಪ್ಯೂ ಸಂದರ್ಭದಲ್ಲಿ ಆರೋಪಿಗಳು ಶಾಹೀನ್ ಬಾಗ್ನ ಸಿಎಎ ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸಿದ್ದರು ಎನ್ನಲಾಗಿದೆ.
ಪ್ರತಿ ಸೋಮವಾರ 10 ಗಂಟೆಗೆ ಶಾಹೀನ್ಬಾಗ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ನ್ಯಾಯಾಲಯವು ಆರೋಪಿಗಳಿಗೆ ಆದೇಶ ನೀಡಿದೆ.
Next Story