ಕೊರೋನ ವೈರಸ್: ದೇಶದಲ್ಲಿ 13.6 ಕೋಟಿ ಉದ್ಯೋಗಾವಕಾಶ ನಷ್ಟ ಸಾಧ್ಯತೆ
ಹೊಸದಿಲ್ಲಿ, ಮಾ.31: ಕೊರೋನ ವೈರಸ್ ಹೋರಾಟದ ಬಳಿಕ ಭಾರತದ ಅರ್ಥ ವ್ಯವಸ್ಥೆಗೆ ದೊಡ್ಡ ಸವಾಲು ಎದುರಾಗಲಿದ್ದು, ಭಾರತದಲ್ಲಿ 13.6 ಕೋಟಿ ಉದ್ಯೋಗಾವಕಾಶ ನಷ್ಟವಾಗುವ ಭೀತಿ ಎದುರಾಗಿದೆ.
ಅಕ್ಟೋಬರ್ 2020 ರ ನಂತರ ಉದ್ಯಮದಲ್ಲಿ ಚೇತರಿಕೆ ವಿಸ್ತರಿಸಿದರೆ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮದಲ್ಲಿ ಅರ್ಧಕ್ಕಿಂತ ಹೆಚ್ಚು ಜನರು 20 ದಶಲಕ್ಷಕ್ಕೂ ಹೆಚ್ಚಿನ ಉದ್ಯೋಗಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಕೈಗಾರಿಕಾ ಸಂಸ್ಥೆ ಸಿಐಐ ಹೇಳಿದೆ.
ಬೇಡಿಕೆ ಮತ್ತು ಪೂರೈಕೆಯ ಅಡಚಣೆಗಳಿಂದಾಗಿ ಕಡಿಮೆ ಬೆಳವಣಿಗೆಯು ಹೊಸ ಉದ್ಯೋಗ ಸೃಷ್ಟಿಯನ್ನು ಕಠಿಣಗೊಳಿಸುವುದಲ್ಲದೆ, ಈಗಉದ್ಯೋಗದಲ್ಲಿರುವವರಿಗೆ ಸಮಸ್ಯೆ ಎದುರಾಗಲಿದೆ.
Next Story