ದಿಲ್ಲಿ: ಶಂಕಿತ ಕೊರೋನ ವೈರಸ್ ರೋಗಿಯಿಂದ ಆತ್ಮಹತ್ಯೆಗೆ ಯತ್ನ
ಹೊಸದಿಲ್ಲಿ, ಎ.5: ಕೊರೋನ ವೈರಸ್ ಸೋಂಕು ಪೀಡಿತ ಎಂದು ಶಂಕಿಸಲಾಗಿರುವ 37ರ ಹರೆಯದ ವ್ಯಕ್ತಿಯೋರ್ವ ಆಸ್ಪತ್ರೆಯ ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಲ್ಲಿ ನಡೆದಿದೆ.
ಮಾ.31ರಂದು ಈ ವ್ಯಕ್ತಿಯನ್ನು ಇಲ್ಲಿಯ ಲೋಕನಾಯಕ ಜಯಪ್ರಕಾಶ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಬೆಳಿಗ್ಗೆ 11:30 ರ ಸುಮಾರಿಗೆ ಈತ ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದ. ನೆಲಕ್ಕೆ ಅಪ್ಪಳಿಸುವ ಮುನ್ನ ತಗಡಿನ ಛಾವಣಿಯ ಮೇಲೆ ಬಿದ್ದಿದ್ದು,ಕಾಲಿನ ಮೂಳೆ ಮುರಿದಿದೆ ಎಂದು ಪೊಲೀಸರು ರವಿವಾರ ತಿಳಿಸಿದರು.
ರೋಗಿಯ ಸ್ಥಿತಿಯು ಸ್ಥಿರವಾಗಿದೆ ಮತ್ತು ಕೊರೋನ ವೈರಸ್ ತಪಾಸಣೆ ವರದಿಗಾಗಿ ಕಾಯಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
Next Story