ಜಾತಿ, ಲೈಂಗಿಕ ತಾರತಮ್ಯ ಆರೋಪ: ಆತ್ಮಹತ್ಯೆಗೆ ಯತ್ನಿಸಿದ ಏಮ್ಸ್ ವೈದ್ಯೆ
ಹೊಸದಿಲ್ಲಿ: ಜಾತಿ ಮತ್ತು ಲೈಂಗಿಕ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ದಿಲ್ಲಿಯ ಏಮ್ಸ್ ಆಸ್ಪತ್ರೆಯ ವೈದ್ಯೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ವೈದ್ಯೆಯ ಆರೋಗ್ಯ ಸ್ಥಿತಿ ಸದ್ಯ ಸುಧಾರಿಸುತ್ತಿದೆ ಎಂದು ಏಮ್ಸ್ ವೈದ್ಯರ ಅಸೋಸಿಯೇಶನ್ ತಿಳಿಸಿದ್ದು, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ರಿಗೆ ಈ ಬಗ್ಗೆ ಪತ್ರ ಬರೆದಿದೆ.
‘ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯದ ಗಂಭೀರ ಪ್ರಕರಣ ಇದಾಗಿದ್ದು, ಏಮ್ಸ್ ಆಡಳಿತದ ನಿರ್ಲಕ್ಷ್ಯದ ವರ್ತನೆ ಇಂತಹ ಅನಾಹುತದ ಹೆಜ್ಜೆ ಇರಿಸಲು ಕಾರಣವಾಗಿದೆ' ಎಂದು ಪತ್ರದಲ್ಲಿ ತಿಳಿಸಲಾಗಿದೆ.
Next Story