ಉ.ಪ್ರದೇಶ: ಬಾಲಕಿಯ ಸಾಮೂಹಿಕ ಅತ್ಯಾಚಾರಗೈದು ವೀಡಿಯೊ ಮಾಡಿದ ದುಷ್ಕರ್ಮಿಗಳು
ಲಕ್ನೋ, ಎ.23: ಶಾಲಾ ಕಟ್ಟಡವೊಂದರಲ್ಲಿ 13ರ ಹರೆಯದ ಬಾಲಕಿಯ ಮೇಲೆ ಇಬ್ಬರು ಅತ್ಯಾಚಾರವೆಸಗಿದ ಮತ್ತು ಇತರ ನಾಲ್ವರು ಈ ಹೇಯ ಕೃತ್ಯವನ್ನು ಚಿತ್ರೀಕರಿಸಿದ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ. ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಅಪರಾಹ್ನ ಮನೆಗೆ ಮರಳುತ್ತಿದ್ದ ಬಾಲಕಿಯನ್ನು ಆರು ಜನರು ಬಲವಂತದಿಂದ ನಿರ್ಜನ ಪ್ರದೇಶದಲ್ಲಿಯ ಶಾಲಾ ಕಟ್ಟಡಕ್ಕೆ ಎಳೆದೊಯ್ದಿದ್ದರು. ಬಾಲಕಿಯ ಪರಿಚಯದವರೆಂದು ಶಂಕಿಸಲಾಗಿರುವ ಇಬ್ಬರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ಇತರ ನಾಲ್ವರು ಅದನ್ನು ಚಿತ್ರೀಕರಿಸಿದ್ದರು. ಎಲ್ಲ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಐಪಿಸಿ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಘಟನೆಯ ಬಗ್ಗೆ ಯಾರಲ್ಲಿಯೂ ಬಾಯ್ಬಿಡದಂತೆ ಆರೋಪಿಗಳು ಬಾಲಕಿಗೆ ಬೆದರಿಕೆಯೊಡ್ಡಿದ್ದರು ಎಂದು ಎಸ್ಪಿ ಎಲ್.ಆರ್.ಕುಮಾರ್ ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಪೊಲೀಸರು ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ್ದಾರೆ.
Next Story