ಕೋವಿಡ್ -19: ಕೇರಳದಲ್ಲಿ ನಾಲ್ಕು ತಿಂಗಳ ಮಗು ಸಾವು
ಸಾಂದರ್ಭಿಕ ಚಿತ್ರ
ಕಲ್ಲಿಕೋಟೆ, ಎ.24: ಕೊರೋನ ವೈರಸ್ ಸೋಂಕಿನಿಂದ ನಾಲ್ಕು ತಿಂಗಳ ಮಗು ಮೃತಪಟ್ಟ ಘಟನೆ ಕೇರಳದ ಕೋಝಿಕ್ಕೋಡ್ ನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಮೃತಪಟ್ಟ ಮಗುವಿಗೆ ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆ ಇತ್ತು ಎಂದು ಮೂಲಗಳು ತಿಳಿಸಿವೆ
ಮಗು ಇದೀಗ ನ್ಯುಮೋನಿಯಾದಿಂದ ಬಳಲುತ್ತಿತ್ತು ಎನ್ನಲಾಗಿದೆ. ಬೆಳಿಗ್ಗೆ 6 ಗಂಟೆ ಸುಮಾರಿಗೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ ಎಂದು ತಿಳಿದು ಬಂದಿದೆ.
ಕೇರಳದಲ್ಲಿ ಇದುವರೆಗೆ ಸುಮಾರು 450 ಕೋವಿಡ್ -19 ಪ್ರಕರಣಗಳು ದೃಢಪಟ್ಟಿದೆ. ಮೂರು ಸಾವು ಸಂಭವಿಸಿದೆ.
Next Story