ರಾಷ್ಟ್ರವ್ಯಾಪಿ ಇನ್ನೂ ಎರಡು ವಾರಗಳ ಕಾಲ ಲಾಕ್ಡೌನ್ ವಿಸ್ತರಣೆ
ಹೊಸದಲ್ಲಿ, ಮೇ.1: ಕೊರೋನ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಮೇ 3 ರವರೆಗೆ ಜಾರಿಗೆ ತರಲಾಗಿರುವ ಲಾಕ್ ಡೌನ್ ಅನ್ನು ಇನ್ನೂ ಎರಡು ವಾರಗಳ ಕಾಲ (ಮೇ.17 ರವರೆಗೆ) ವಿಸ್ತರಿಸಿ ಕೇಂದ್ರ ಸರಕಾರ ಶುಕ್ರವಾರ ಆದೇಶಿಸಿದೆ.
ಲಾಕ್ ಡೌನ್ ವೇಳೆ ಗ್ರೀನ್ ಹಾಗೂ ಆರೆಂಜ್ ಝೋನ್ ಗಳಲ್ಲಿ ಅಲ್ಪ ಸಡಿಲಿಕೆ ಇರಲಿದೆ. ಆದರೆ ರೆಡ್ ಝೋನ್ ನಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ಕೇಂದ್ರಸರಕಾರವು ಎರಡನೇ ಹಂತದ ಲಾಕ್ಡೌನ್ನ್ನು ಮೇ 3ರ ತನಕ ವಿಸ್ತರಣೆ ಮಾಡಿತ್ತು. ಇದೀಗ ಮೂರನೇ ಹಂತದ ಲಾಕ್ಡೌನ್ನ್ನು ಮೇ 4ರ ಬಳಿಕವೂ ವಿಸ್ತರಣೆ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
Next Story