ಜು.18ರಿಂದ 23ರವರೆಗೆ ಜೆಇಇ ಮೇನ್ಸ್: ಜು.26ರಂದು ನೀಟ್ ಪರೀಕ್ಷೆ
ಹೊಸದಿಲ್ಲಿ,ಮೇ 5: ಈ ವರ್ಷದ ಜೆಇಇ ಮೇನ್ಸ್ ಪರೀಕ್ಷೆ ಜು.18ರಿಂದ ಜು.23ರವರೆಗೆ ಮತ್ತು ನೀಟ್ ಪರೀಕ್ಷೆ ಜು.26ರಂದು ನಡೆಯಲಿದೆ ಎಂದು ಮಂಗಳವಾರ ಪ್ರಕಟಿಸುವ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ ಪೋಖ್ರಿಯಾಲ ನಿಷಾಂಕ್ ಅವರು ಸುಮಾರು 25 ಲಕ್ಷ ಅಭ್ಯರ್ಥಿಗಳನ್ನು ಕಾಡುತ್ತಿದ್ದ ಅನಿಶ್ಚಿತತೆಗೆ ಅಂತ್ಯ ಹಾಡಿದ್ದಾರೆ.
ಈ ಮೊದಲು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಎ.5,7,8 ಮತ್ತು 11ರಂದು ನಡೆಯಬೇಕಾಗಿದ್ದ 2020ನೇ ಸಾಲಿನ ಜೆಇಇ ಮೇನ್ಸ್ ಪರೀಕ್ಷೆಯನ್ನು ಮೇ ಕೊನೆಯ ವಾರಕ್ಕೆ ಮುಂದೂಡಿತ್ತು.
ಬಾಕಿಯುಳಿದಿರುವ ಸಿಬಿಎಸ್ಇ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಕುರಿತು ಶೀಘ್ರವೇ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗುವುದು ಎಂದು ನಿಷಾಂಕ್ ತಿಳಿಸಿದರು.
Next Story