ಛತ್ತೀಸ್ ಗಢ ಮಾಜಿ ಸಿಎಂ ಅಜಿತ್ ಜೋಗಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
ಹೊಸದಿಲ್ಲಿ: ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರಿಗೆ ಇಂದು ಹೃದಯಾಘಾತವಾಗಿದ್ದು ಅವರನ್ನು ತಕ್ಷಣ ರಾಯಪುರ್ನ ಆಶ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯಸ್ಥಿತಿ ಗಂಭೀರವಾಗಿದೆಯೆನ್ನಲಾಗಿದ್ದು, ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದಾರೆ.
ಎಪ್ಪತ್ನಾಲ್ಕು ವರ್ಷದ ಜೋಗಿ ಅವರು ತಮ್ಮ ಮನೆಯ ತೋಟದಲ್ಲಿದ್ದಾಗ ಇಂದು ಅಪರಾಹ್ನ 12.30ರ ಹೊತ್ತಿಗೆ ಕುಸಿದು ಬಿದ್ದರೆನ್ನಲಾಗಿದೆ. ಇಂದು ಬೆಳಗ್ಗಿನಿಂದ ಅಜಿತ್ ಜೋಗಿ ಎಂದಿನಂತೆ ಲವಲವಿಕೆಯಿಂದಿದ್ದರೂ ತೋಟದಲ್ಲಿದ್ದಾಗ ಹುಣಸೆ ಬೀಜವೊಂದನ್ನು ಬಾಯಿಗೆ ಹಾಕಿದಾಗ ಅದು ಗಂಟಲಲ್ಲಿ ಸಿಲುಕಿಕೊಂಡಿತ್ತೆನ್ನಲಾಗಿದ್ದು, ನಂತರ ಅವರಿಗೆ ಹೃದಯಾಘಾತವಾಗಿದೆ.
ಅವರ ಪತ್ನಿ ಹಾಗೂ ಶಾಸಕಿ ರೇಣು ಜೋಗಿ ಹಾಗೂ ಪುತ್ರ ಅಮಿತ್ ಜೋಗಿ ಅವರ ಬಳಿ ಆಸ್ಪತ್ರೆಯಲ್ಲಿದ್ದಾರೆ. 2016ರಲ್ಲಿ ಕಾಂಗ್ರೆಸ್ ತೊರೆದಿದ್ದ ಅಜಿತ್ ಜೋಗಿ ನಂತರ ಜನತಾ ಕಾಂಗ್ರೆಸ್ ಛತ್ತೀಸಗಢ್ ಸ್ಥಾಪಿಸಿದ್ದರು.
Next Story