ಲಾಕ್ ಡೌನ್ ನಡುವೆಯೂ ಉ. ಪ್ರದೇಶದಲ್ಲಿ ಗುಂಪು ಥಳಿತ: ವ್ಯಕ್ತಿಗೆ ಸುತ್ತಿಗೆ, ರಾಡ್ ಗಳಿಂದ ಮಾರಣಾಂತಿಕ ಹಲ್ಲೆ
ವಿಡಿಯೋ ವೈರಲ್
ಲಕ್ನೋ : ಉತ್ತರ ಪ್ರದೇಶದ ಮಥುರಾದಲ್ಲಿ ವ್ಯಕ್ತಿಯೊಬ್ಬನ ಮೇಲೆ ಕೆಲ ದುಷ್ಕರ್ಮಿಗಳು ರಾಡ್ ಗಳು ಹಾಗೂ ದೊಡ್ಡ ಸುತ್ತಿಗೆಯೊಂದರಿಂದ ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವೀಡಿಯೋವೊಂದು ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ.
ಹಲವು ಟ್ವಿಟ್ಟರಿಗರು ಈ ವೀಡಿಯೋ ಶೇರ್ ಮಾಡಿ ಲಾಕ್ ಡೌನ್ ಸಂದರ್ಭದಲ್ಲೂ ಇಂತಹ ಬರ್ಬರ ಹಲ್ಲೆ ಘಟನೆಗಳೇಕೆ ನಿಂತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮಥುರಾದ ಬರ್ಸಾನ ಎಂಬಲ್ಲಿ ಈ ಘಟನೆ ನಡೆದಿದೆಯೆನ್ನಲಾಗಿದ್ದು, ಸಂತ್ರಸ್ತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಗುಂಪು ಥಳಿತ ಘಟನೆಯನ್ನು ಖಂಡಿಸಿ ಹಲವರು ಟ್ವೀಟ್ ಮಾಡಿದ್ದಾರೆ ಹಾಗೂ ರಾಜ್ಯ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗಳ ಟ್ವಿಟ್ಟರ್ ಹ್ಯಾಂಡಲ್ಗಳನ್ನು ತಮ್ಮ ಟ್ವೀಟ್ ಜತೆ ಟ್ಯಾಗ್ ಮಾಡಿದ್ದಾರೆ.
ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಮಥುರಾ ಪೊಲೀಸರು ಘಟನೆ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಎಫ್ಐಆರ್ ಕೂಡ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
दिल दहलाने वाला प्रहार। देख कर ही आंखों के सामने लालिमा छा गई। ऐसे जल्लाद लोग भी इंसानों के बीच हैं। @dgpup साहब @Uppolice की @mathurapolice क्या कर रही...? यहां पुलिस का खौफ दिखता ही नहीं...? https://t.co/Dr5vDIx66c
— Ajai Bhadauria (@AjaiBhadauriya) May 10, 2020