ಮಧ್ಯಪ್ರದೇಶ ರಾಜ್ಯಪಾಲ ಟಂಡನ್ ಆರೋಗ್ಯಸ್ಥಿತಿ ಗಂಭೀರ
ಭೋಪಾಲ, ಜೂ.16: ಉಸಿರಾಟದ ಸಮಸ್ಯೆಗೆ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಧ್ಯಪ್ರದೇಶದ ರಾಜ್ಯಪಾಲ ಲಾಲ್ಜಿ ಟಂಡನ್ರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉಸಿರಾಟದ ತೊಂದರೆ, ಮೂತ್ರ ವಿಸರ್ಜನೆಯಲ್ಲಿ ತೊಂದರೆ ಹಾಗೂ ಜ್ವರದ ಸಮಸ್ಯೆಯ ಹಿನ್ನೆಲೆಯಲ್ಲಿ 85 ವರ್ಷದ ಟಂಡನ್ರನ್ನು ಜೂನ್ 11ರಂದು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಕಿಬ್ಬೊಟ್ಟೆಯ ಆಂತರಿಕ ರಕ್ತಸ್ರಾವ ಸಮಸ್ಯೆಗೆ ಆಪರೇಷನ್ ನಡೆಸಲಾಗಿದೆ. ಬಳಿಕ ಅವರನ್ನು ತೀವ್ರನಿಗಾ ಘಟಕಕ್ಕೆ ದಾಖಲಿಸಲಾಗಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಆದರೆ ಶ್ವಾಸಕೋಶ, ಕಿಡ್ನಿ ಮತ್ತು ಕರುಳಿನ ಸಮಸ್ಯೆಯಿಂದ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿದ್ದು ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದ್ದರೂ ನಿಯಂತ್ರಣದಲ್ಲಿದೆ ಎಂದು ತಿಳಿಸಲಾಗಿದೆ.
Next Story