ಚೀನಾ ಗಡಿಯಲ್ಲಿ 32 ರಸ್ತೆ ಯೋಜನೆಗಳ ಕಾಮಗಾರಿ ತ್ವರಿತಕ್ಕೆ ಸರಕಾರದ ನಿರ್ಧಾರ
ಹೊಸದಿಲ್ಲಿ,ಜೂ.22: ಭಾರತ ಮತ್ತು ಚೀನಾ ಸೇನೆಗಳ ನಡುವೆ ಮುಂದುವರಿದಿರುವ ಬಿಕ್ಕಟ್ಟಿನ ನಡುವೆಯೇ ಕೇಂದ್ರವು ಸೋಮವಾರ ಭಾರತ-ಚೀನಾ ಗಡಿಯಲ್ಲಿ ಪ್ರಗತಿಯಲ್ಲಿರುವ ರಸ್ತೆ ನಿರ್ಮಾಣ ಯೋಜನೆಗಳನ್ನು ಪುನರ್ಪರಿಶೀಲನೆ ನಡೆಸಿದ್ದು,ಈ ಪೈಕಿ 32 ಯೋಜನೆಗಳ ಕಾಮಗಾರಿಗಳನ್ನು ತ್ವರಿತಗೊಳಿಸಲು ನಿರ್ಧರಿಸಿದೆ ಎಂದು ಅಧಿಕಾರಿಗಳು ಇಲ್ಲಿ ತಿಳಿಸಿದರು.
ಗೃಹ ಸಚಿವಾಲಯವು ಕರೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರೀಯ ಲೋಕೋಪಯೋಗಿ ಇಲಾಖೆ,ಗಡಿ ರಸ್ತೆಗಳ ಸಂಸ್ಥೆ ಮತ್ತು ಐಟಿಬಿಪಿ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Next Story