ಒಬಿಸಿ ಆಯೋಗದ ಅವಧಿ ಆರು ತಿಂಗಳು ವಿಸ್ತರಣೆ
ಹೊಸದಿಲ್ಲಿ,ಜೂ.24: ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಾವಧಿಯನ್ನು ಇನ್ನೂ ಆರು ತಿಂಗಳು ವಿಸ್ತರಿಸಲು ಕೇಂದ್ರ ಸಂಪುಟವು ನಿರ್ಧರಿಸಿದೆ. ಇದರೊಂದಿಗೆ ಆಯೋಗದ ಅವಧಿಯು 2021,ಜ.31ರವರೆಗೆ ವಿಸ್ತರಣೆಗೊಂಡಿದೆ.
ಬುಧವಾರ ಇಲ್ಲಿ ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸಿದ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು,ಇತರ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ವಿವಿಧ ಶಿಫಾರಸುಗಳನ್ನು ಮಾಡುವ ಕಾರ್ಯಭಾರವನ್ನು ಆಯೋಗಕ್ಕೆ ಒಪ್ಪಿಸಲಾಗಿತ್ತು,ಆದರೆ ಕೊರೋನ ವೈರಸ್ ಪಿಡುಗಿನಿಂದಾಗಿ ಅದರ ಕೆಲಸಕ್ಕೆ ವ್ಯತ್ಯಯವುಂಟಾಗಿತ್ತು ಎಂದರು.
ಇತರ ಕಾರ್ಯಗಳ ಜೊತೆಗೆ ಇತರ ಹಿಂದುಳಿದ ವರ್ಗಗಳಲ್ಲಿ ಉಪ-ವರ್ಗೀಕರಣದ ವಿಷಯವನ್ನೂ ಆಯೋಗವು ಪರಿಶೀಲಿಸಲಿದೆ.
Next Story