TikTok, UC Browser ಸೇರಿ 59 ಚೀನಿ ಆ್ಯಪ್ ಗಳನ್ನು ನಿಷೇಧಿಸಿದ ಭಾರತ ಸರಕಾರ | Vartha Bharati- ವಾರ್ತಾ ಭಾರತಿ

ಇಲ್ಲಿದೆ ಆ್ಯಪ್ ಗಳ ಸಂಪೂರ್ಣ ವಿವರ

TikTok, UC Browser ಸೇರಿ 59 ಚೀನಿ ಆ್ಯಪ್ ಗಳನ್ನು ನಿಷೇಧಿಸಿದ ಭಾರತ ಸರಕಾರ

ಹೊಸದಿಲ್ಲಿ, ಜೂ.29: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ಸುರಕ್ಷತೆಯ ಕಾರಣದಿಂದ ಚೀನಾದ 59 ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸಲು ಕೇಂದ್ರ ಸರಕಾರವು ಸೋಮವಾರ ನಿರ್ಧರಿಸಿದ್ದು,ಈ ಆ್ಯಪ್‌ಗಳನ್ನು ಬ್ಲಾಕ್ ಮಾಡುವಂತೆ ಫೋನ್ ಕಂಪನಿಗಳಿಗೆ ಆದೇಶವನ್ನು ಹೊರಡಿಸಿದೆ.

ಲಡಾಖ್ ಗಡಿಯಲ್ಲಿ ಚೀನಾದೊಂದಿಗೆ ಗಡಿ ಬಿಕ್ಕಟ್ಟಿಗೆ ಹಲವು ವಾರಗಳ ಮೊದಲೇ ಚೀನಿ ಆ್ಯಪ್‌ಗಳನ್ನು ನಿಷೇಧಿಸುವ ಕುರಿತು ಚರ್ಚೆಗಳು ಆರಂಭವಾಗಿದ್ದವು. ಜೂ.15ರಂದು ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವಿನ ಹಿಂಸಾತ್ಮಕ ಘರ್ಷಣೆಗಳ ಬಳಿಕ ಈ ಚರ್ಚೆಗಳು ವೇಗ ಪಡೆದುಕೊಂಡಿದ್ದು, ಟಿಕ್‌ಟಾಕ್, ಯುಸಿ ಬ್ರೌಸರ್, ಶೇರ್‌ಇಟ್ ಸೇರಿದಂತೆ ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸುವ ಮಹತ್ವದ ನಿರ್ಧಾರವನ್ನು ಸರಕಾರವು ಈಗ ತೆಗೆದುಕೊಂಡಿದೆ.

ಲಭ್ಯ ಮಾಹಿತಿಯಂತೆ ಈ ಆ್ಯಪ್‌ಗಳು ಭಾರತದ ಸಾರ್ವಭೌಮತೆ ಮತ್ತು ಅಖಂಡತೆಗೆ, ಭಾರತದ ಭದ್ರತೆಗೆ, ಸರಕಾರದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಯನ್ನುಂಟು ಮಾಡುವ ಚಟುವಟಿಕೆಗಳಲ್ಲಿ ತೊಡಗಿದ್ದವು, ಹೀಗಾಗಿ ಈ 59 ಆ್ಯಪ್‌ಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಕ್ಲೀನ್ ಮಾಸ್ಟರ್, ಕ್ಯಾಮ್ ಸ್ಕಾನರ್, ಡಿಯು ಬ್ಯಾಟರಿ ಸೇವರ್, ಕ್ಲಬ್ ಫ್ಯಾಕ್ಟರಿ ಇತ್ಯಾದಿಗಳೂ ನಿಷೇಧಿಸಲ್ಪಟ್ಟಿರುವ ಚೀನಿ ಆ್ಯಪ್‌ಗಳಲ್ಲಿ ಸೇರಿವೆ.

ಮೊಬೈಲ್ ಫೋನ್‌ಗಳಿಂದ ಡಾಟಾಗಳನ್ನು ಕದ್ದು ಅವುಗಳನ್ನು ದೇಶದ ಹೊರಕ್ಕೆ ರವಾನಿಸಲು ಈ ಆ್ಯಪ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಹೀಗೆ ರವಾನೆಯಾದ ಡಾಟಾಗಳನ್ನು ನಾಗರಿಕರ ಖಾಸಗಿತನವನ್ನು ಉಲ್ಲಂಘಿಸಲು ಬಳಸಬಹುದಾಗಿದೆ. ಆದ್ದರಿಂದ ಅವುಗಳನ್ನು ನಿರ್ಬಂಧಿಸುವಂತೆ ಭಾರತೀಯ ಗುಪ್ತಚರ ಏಜೆನ್ಸಿಗಳು ಒತ್ತಡ ಹೇರುತ್ತಲೇ ಬಂದಿದ್ದವು.

ಚೀನಿ ಕಂಪನಿಗಳು ತಮ್ಮ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳಲ್ಲಿ ಮಾಲ್‌ವೇರ್‌ಗಳನ್ನು ಸೇರಿಸುತ್ತವೆ ಎಂಬ ಶಂಕೆ ಹಿಂದಿನಿಂದಲೂ ಇದೆ. ಹಲವಾರು ದೇಶಗಳು ಚೀನಿ ನಿರ್ಮಿತ 5ಜಿ ನೆಟ್‌ವರ್ಕಿಂಗ್ ಉಪಕರಣಗಳನ್ನು ಬಳಸುವುದಕ್ಕೆ ಹಿಂದೇಟು ಹೊಡೆಯುತ್ತಿರುವದಕ್ಕೆ ಪ್ರಮುಖ ಕಾರಣಗಳಲ್ಲಿ ಇದೂ ಒಂದಾಗಿದೆ.

ಸರಕಾರ ನಿಷೇಧಿಸಿರುವ 59 ಆ್ಯಪ್ ಗಳ ಪಟ್ಟಿ ಈ ಕೆಳಗಿದೆ.

TikTok

Shareit

Kwai

UC Browser

Baidu map

Shein

Clash of Kings

DU battery saver

Helo

Likee

YouCam makeup

Mi Community

CM Browers

Virus Cleaner

APUS Browser

ROMWE

Club Factory

Newsdog

Beutry Plus

WeChat

UC News

QQ Mail

Weibo

Xender

QQ Music

QQ Newsfeed

Bigo Live

SelfieCity

Mail Master

Parallel Space

Mi Video Call Xiaomi

WeSync

ES File Explorer

Viva Video QU Video Inc

Meitu

Vigo Video

New Video Status

DU Recorder

Vault- Hide

Cache Cleaner DU App studio

DU Cleaner

DU Browser

Hago Play With New Friends

Cam Scanner

Clean Master Cheetah Mobile

Wonder Camera

Photo Wonder

QQ Player

We Meet

Sweet Selfie

Baidu Translate

Vmate

QQ International

QQ Security Center

QQ Launcher

U Video

V fly Status Video

Mobile Legends

DU Privacy

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top