“ನಿಮ್ಮಲ್ಲಿ ಅನುಕಂಪ ಎಂಬುದು ಇಲ್ಲವೇ?”: ಸಂಬಿತ್ ಪಾತ್ರಾ ವಿರುದ್ಧ ಟ್ವಿಟರಿಗರ ಆಕ್ರೋಶ
ಅಜ್ಜನ ಮೃತದೇಹದ ಬಳಿ ಕುಳಿತ ಮಗುವಿನ ಫೋಟೊ ಬಗ್ಗೆ ವಿವಾದಾತ್ಮಕ ಟ್ವೀಟ್
ಹೊಸದಿಲ್ಲಿ : ಬುಧವಾರ ಕಾಶ್ಮೀರದ ಸೋಪೋರ್ ಎಂಬಲ್ಲಿ ಉಗ್ರರ ಗುಂಡಿನ ದಾಳಿಗೆ 60 ವರ್ಷದ ನಾಗರಿಕರೊಬ್ಬರು ಮೃತಪಟ್ಟಿದ್ದು, ಅವರ 3 ವರ್ಷದ ಮೊಮ್ಮಗ ಅಜ್ಜನ ಮೃತದೇಹದ ಮೇಲೆ ಕುಳಿತು ಅಳುತ್ತಿರುವ ಚಿತ್ರ ಎಲ್ಲರ ಮನಕಲಕಿತ್ತು. ಈ ನಡುವೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಈ ಚಿತ್ರದ ಬಗ್ಗೆ ಮಾಡಿರುವ ಟ್ವೀಟ್ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಫೋಟೊವನ್ನು ಟ್ವೀಟ್ ಮಾಡಿದ್ದ ಸಂಬಿತ್ ಪಾತ್ರಾ ಅದರ ಕೆಳಗೆ `ಪುಲಿಟ್ಝರ್ ಲವರ್ಸ್?'' ಎಂದು ಬರೆದಿದ್ದರು. ಬಹುತೇಕ ಟ್ವಿಟ್ಟರಿಗರಿಗೆ ಪಾತ್ರ ಅವರ ಈ ಕಮೆಂಟ್ ಇಷ್ಟಗಾಗಿಲ್ಲ. ಬಾಲಿವುಡ್ ನಟಿ ದಿಯಾ ಮಿರ್ಝಾ ಟ್ವಿಟ್ ಮಾಡಿ , “ನಿಮ್ಮಲ್ಲಿ ಅನುಕಂಪ ಎಂಬುದು ಒಂದಿನಿತೂ ಇಲ್ಲವೇ?'' ಎಂದು ಪ್ರಶ್ನಿಸಿದರೆ ಹನ್ಸಲ್ ಮೆಹ್ತಾ ಎಂಬವರು ಟ್ವೀಟ್ ಮಾಡಿ, “ಈ ವ್ಯಕ್ತಿ ಆಡಳಿತ ಪಕ್ಷದ ವಕ್ತಾರನಾಗಿದ್ದರೂ ಟ್ರೋಲ್ ಅಲ್ಲದೆ ಮತ್ತಿನ್ನೇನಲ್ಲ'' ಎಂದು ಬರೆದಿದ್ದಾರೆ.
ಶಾಸಕ ಜಿಗ್ನೇಶ್ ಮೇವಾನಿ ಟ್ವೀಟ್ ಮಾಡಿ ``ಇದು ಶಾಖಾ ವರ್ತನೆಯ ಮಟ್ಟ. ಮೊದಲು ಸಂವಿಧಾನದ 370ನೇ ವಿಧಿಯನ್ನು ಅಪ್ರಜಾಸತ್ತಾತ್ಮಕವಾಗಿ ತೆಗೆದು ಹಾಕುವುದು ಹಾಗೂ ಇದು ಅಂತಿಮವಾಗಿ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡುವುದೆಂದು ಭರವಸೆ ನೀಡುವುದು, ನಂತರ ಕಾಶ್ಮೀರಿ ನಾಗರಿಕನ ಸಾವು ಹಾಗೂ ಅಳುತ್ತಿರುವ ಮಗುವನ್ನು ಅಣಕವಾಡುವುದು. ಈಗ ಅಲ್ಲಿ ಶಾಂತಿಯೂ ಇಲ್ಲ, ನೀವು ಲಜ್ಜೆಗೆಟ್ಟವರೆಂದೂ ಸಾಬೀತು ಪಡಿಸಿದ್ದೀರಿ'' ಎಂದು ಬರೆದಿದ್ದಾರೆ.
PULITZER LOVERS ?? pic.twitter.com/Mvau0UAyux
— Sambit Patra (@sambitswaraj) July 1, 2020
Do you not have an iota of empathy left in you?? https://t.co/PJYT4uZZbj
— Dia Mirza (@deespeak) July 1, 2020
@sambitswaraj please delete this tweet. It is beyond words. https://t.co/oVU0w5EXTC
— Sumanth Raman (@sumanthraman) July 1, 2020
This man who is supposed to be a spokesperson for the ruling party but is nothing but a troll and chronic abuser must be reported. https://t.co/cdc3FIwvt7
— Hansal Mehta (@mehtahansal) July 1, 2020
Cant you just observe or comment on the horrific human tragedy of something like this without it being used as snark for a political grouping you disagree with? You are at a level of sickness & vileness that there may not be a way back from. Hope the journey was worth it. https://t.co/nFAmjxfHSK
— Abhinandan Sekhri (@AbhinandanSekhr) July 1, 2020
With people like this one, it's not a question of political differences. They are depraved human beings with a depraved ideology. https://t.co/QFhGbCaV2v
— Aditya Menon (@AdityaMenon22) July 1, 2020
This is the level of Shaakha behaviour.
— Jignesh Mevani (@jigneshmevani80) July 1, 2020
First undemocratically remove Art 370 and assure that it will finally bring peace to Kashmir, then at the same time mock a crying baby and the death of a Kashmiri civilian?!
Not only is there no peace yet, you also prove you are shameless. https://t.co/Af69w04yUJ