ದೇಶದಲ್ಲಿ 18 ಸಾವಿರ ದಾಟಿದ ಕೊರೋನ ಸಾವು : ಒಂದೇ ದಿನ 22 ಸಾವಿರ ಸೋಂಕು ಪ್ರಕರಣ | Vartha Bharati- ವಾರ್ತಾ ಭಾರತಿ

ದೇಶದಲ್ಲಿ 18 ಸಾವಿರ ದಾಟಿದ ಕೊರೋನ ಸಾವು : ಒಂದೇ ದಿನ 22 ಸಾವಿರ ಸೋಂಕು ಪ್ರಕರಣ

ಹೊಸದಿಲ್ಲಿ : ನೋವಲ್ ಕೊರೋನ ವೈರಸ್ ಸೋಂಕಿನಿಂದ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 18 ಸಾವಿರದ ಗಡಿ ದಾಟಿದೆ. ಗುರುವಾರ ಒಂದೇ ದಿನ 22 ಸಾವಿರ ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸಾಂಕ್ರಾಮಿಕ ಭಾರತಕ್ಕೆ ದಾಳಿ ಇಟ್ಟ ಬಳಿಕ ಒಂದು ದಿನದಲ್ಲಿ ದಾಖಲಾದ ಗರಿಷ್ಠ ಸಂಖ್ಯೆಯ ಪ್ರಕರಣ ಇದಾಗಿದೆ.

ಜೂನ್ 27ರಂದು 20,060 ಪ್ರಕರಣಗಳು ದಾಖಲಾದದ್ದು ಇದುವರೆಗಿನ ಗರಿಷ್ಠ ಸಂಖ್ಯೆಯಾಗಿತ್ತು. ಮಹಾರಾಷ್ಟ್ರ (6630), ತಮಿಳುನಾಡು (4343), ಕರ್ನಾಟಕ (1502) ಮತ್ತು ತೆಲಂಗಾಣ (1213) ಗರಿಷ್ಠ ಪ್ರಕರಣಗಳು ದಾಖಲಾದ ರಾಜ್ಯಗಳು. ಉಳಿದಂತೆ ಆಂಧ್ರಪ್ರದೇಶ (845), ಉತ್ತರ ಪ್ರದೇಶ (817), ಗುಜರಾತ್ (681), ಬಿಹಾರ (478) ರಾಜ್ಯಗಳಲ್ಲೂ ಗರಿಷ್ಠ ಏರಿಕೆ ಕಂಡುಬಂದಿದೆ. ಬಂಗಾಳ ಹಾಗೂ ಅಸ್ಸಾಂ ಕ್ರಮವಾಗಿ 649 ಹಾಗೂ 408 ಪ್ರಕರಣಗಳನ್ನು ದಾಖಲಿಸಿವೆ.

ಎರಡು ದಿನಗಳ ಹಿಂದೆ 17 ಸಾವಿರದ ಗಡಿ ದಾಟಿದ್ದ ಸಾವಿನ ಸಂಖ್ಯೆ ಗುರುವಾರ 379 ಸಾವು ದಾಖಲಾಗುವ ಮೂಲಕ 18 ಸಾವಿರವನ್ನು ದಾಟಿದೆ. ಕೇವಲ ಒಂದು ವಾರದಲ್ಲಿ ದೇಶದಲ್ಲಿ 2917 ಸಾವು ಸಂಭವಿಸಿದೆ.

ಗುರುವಾರ ದೇಶದಲ್ಲಿ 22,045 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 6,27,023ಕ್ಕೇರಿರುವುದು ರಾಜ್ಯಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.

ಮಹಾರಾಷ್ಟ್ರದಲ್ಲಿ ಒಂದು ದಿನದಲ್ಲಿ ಇದುವರೆಗಿನ ಅಂದರೆ 6330 ಪ್ರಕರಣಗಳು ಗುರುವಾರ ದಾಖಲಾಗಿವೆ. ಆದರೆ ರಾಜ್ಯದಲ್ಲಿ ಗುಣಮುಖ ರಾದವರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ ಎಂದು ಸರ್ಕಾರ ಹೇಳಿದೆ. ಗುರುವಾರ 8018 ಮಂದಿ ಬಿಡುಗಡೆಯಾಗಿದ್ದು, ಗುಣಮುಖರಾದವರ ಸಮಖ್ಯೆ 1,01,172ಕ್ಕೇರಿದೆ. ಒಟ್ಟು 1,86,626 ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿದ್ದು, ಗುರುವಾರ ಒಂದೇ ದಿನ 125 ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಕೂಡಾ ಗರಿಷ್ಠ ಸಂಖ್ಯೆಯ ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದ 1502 ಪ್ರಕರಣಗಳ ಪೈಕಿ 889 ಪ್ರಕರಣಗಳು ಬೆಂಗಳೂರು ನಗರದಲ್ಲಿ ದಾಖಲಾಗಿವೆ. ರಾಜ್ಯದಲ್ಲಿ ಒಟ್ಟು 18,016 ಸೋಂಕಿತರಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top