2.89 ಲಕ್ಷ ರೂ. ವೆಚ್ಚದ ಚಿನ್ನದ ಮಾಸ್ಕ್ ಧರಿಸಿದ ಪುಣೆಯ ವ್ಯಕ್ತಿ!
ಪುಣೆ,ಜು.4: ಪುಣೆಯ ವ್ಯಕ್ತಿಯೊಬ್ಬ ಕೊರೋನ ಕಾಲದಲ್ಲೀಗ ಚಿನ್ನದ ಮಾಸ್ಕ್ ಧರಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚ್ವಾಡ ನಿವಾಸಿ ಶಂಕರ್ ಕುರಾಡೆ 2.89 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಾಸ್ಕ್ನ್ನು ಧರಿಸಿದ್ದಾರೆ.
"ಇದೊಂದು ತೆಳುವಾದ ಮಾಸ್ಕ್. ಸಣ್ಣ ತೂತುಗಳು ಕೂಡ ಇದೆ.ಹೀಗಾಗಿ ಉಸಿರಾಡಲು ಸಮಸ್ಯೆಯಾಗುವುದಿಲ್ಲ. ಇದು ಪರಿಣಾಮಕಾರಿ ಮಾಸ್ಕ್ ಆಗಿದೆಯೇ ಎಂದು ನನಗೆ ಗೊತ್ತಿಲ್ಲ'' ಎಂದು ಶಂಕರ್ ಎಎನ್ಐಗೆ ತಿಳಿಸಿದ್ದಾರೆ.
Next Story