ಗಲ್ವಾನ್ ಕಣಿವೆಯಿಂದ 1 ಕಿಲೋಮೀಟರ್ ನಷ್ಟು ಹಿಂದಕ್ಕೆ ಸರಿದ ಚೀನಾ ಸೈನಿಕರು: ವರದಿ
ಹೊಸದಿಲ್ಲಿ: ಇತ್ತೀಚೆಗಷ್ಟೇ ಭಾರತ-ಚೀನಾ ಸೈನಿಕರ ನಡುವೆ ಹೊಡೆದಾಟ ನಡೆದು 20 ಭಾರತೀಯ ಸೈನಿಕರು ಹುತಾತ್ಮರಾದ ಲಡಾಖ್ ನ ಗಲ್ವಾನ್ ಕಣಿವೆಯಿಂದ ಭಾರತ ಮತ್ತು ಚೀನಾ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿದೆ ಎಂದು ndtv.com ವರದಿ ಮಾಡಿದೆ.
ಹೆಚ್ಚಿನ ಸಂಘರ್ಷವನ್ನು ತಡೆಯುವುದಕ್ಕಾಗಿ ಎರಡೂ ಸೇನೆಗಳ ನಡುವೆ ಬಫರ್ ಝೋನ್ ಅನ್ನು ನಿರ್ಮಿಸಲಾಗಿದೆ ಎಂದು ವರದಿಯಾಗಿದೆ.
ಇದು ಶಾಶ್ವತ ಕ್ರಮವೇ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ಮೂಲಗಳು ತಿಳಿಸಿರುವುದಾಗಿ ndtv.com ವರದಿ ತಿಳಿಸಿದೆ.
Next Story