ಕೊರೋನದಿಂದ ಗುಣಮುಖರಾದವರನ್ನು ಆಲಂಗಿಸಿ ಬೀಳ್ಕೊಡುವ ವೈದ್ಯ
ಪಣಜಿ: ಕೊರೋನದಿಂದ ಗುಣಮುಖರಾದವರನ್ನು ಆಲಂಗಿಸಿ, ಶುಭ ಹಾರೈಸುತ್ತಿರುವ ಗೋವಾದ ವೈದ್ಯರೊಬ್ಬರು , ಸೋಂಕಿನಿಂದ ಗುಣಮುಖರಾದವರನ್ನು ಸಮಾಜ ದೂರ ಇರಿಸದೆ, ಒಪ್ಪಿಕೊಳ್ಳಬೇಕು ಎನ್ನುವ ಸಂದೇಶವನ್ನು ನೀಡುತ್ತಿದ್ದಾರೆ.
ಗೋವಾ ಮೆಡಿಕಲ್ ಕಾಲೇಜಸ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿರುವ ಡಾ. ಎಡ್ವಿನ್ ಗೋಮ್ಸ್ ಅವರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರು ಕೋವಿಡ್ 19 ಆಸ್ಪತ್ರೆಯೊಂದರಲ್ಲಿ ವೈದ್ಯರ ತಂಡದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದುವರೆಗೆ ಅವರು ಸುಮಾರು 190 ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವ ಸಂದರ್ಭ ಅಪ್ಪಿಕೊಂಡು ಶುಭ ಹಾರೈಸಿದ್ದಾರೆ.
ಕೊರೋನ ರೋಗಿಗಳನ್ನು ಯಾರೂ ತಿರಸ್ಕರಿಸಬಾರದು ಎನ್ನುವ ಸಂದೇಶವನ್ನು ನೀಡುವ ಉದ್ದೇಶದಿಂದ ತಾನು ಹೀಗೆ ಮಾಡುತ್ತಿದ್ದೇನೆ ಎಂದು ಎಡ್ವಿನ್ ಗೋಮ್ಸ್ ಹೇಳುತ್ತಾರೆ.
Next Story