ದಿಲ್ಲಿಯಲ್ಲಿ ಡೀಸೆಲ್ ಮೇಲಿನ ವ್ಯಾಟ್ ಕಡಿತ
ಹೊಸದಿಲ್ಲಿ,ಜು.30: ಡೀಸೆಲ್ ಮೇಲಿನ ವೌಲ್ಯ ವರ್ಧಿತ ತೆರಿಗೆ(ವ್ಯಾಟ್)ಶೇ.16.75ರಷ್ಟು ಕಡಿತ ಮಾಡಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 8 ರೂ.ಗಿಂತ ಕಡಿಮೆಯಾಗಲಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಘೋಷಿಸಿದರು.
ಈ ತನಕ ದಿಲ್ಲಿಯಲ್ಲಿ ಶೇ.30ರಷ್ಟು ವ್ಯಾಟ್ ವಿಧಿಸಲಾಗುತ್ತಿತ್ತು. ಪ್ರಸ್ತುತ ಮೆಟ್ರೋ ನಗರದಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.81.94ರಷ್ಟಿದೆ. ಇದು ಪೆಟ್ರೋಲ್ಗಿಂತ ಸುಮಾರು ಶೇ.2ರಷ್ಟು ಹೆಚ್ಚಳವಾಗಿದೆ. ಈಗ ದಿಲ್ಲಿಯಲ್ಲಿ ಡೀಸೆಲ್ ಬೆಲೆ ಲೀಟರ್ಗೆ 80.43 ರೂ. ಆಗಿದ್ದು, ಕಳೆದ ಕೆಲವು ವಾರಗಳಿಂದ ದಿಲ್ಲಿಯಲ್ಲಿ ಪೆಟ್ರೋಲ್ಗಿಂತ ಡೀಸೆಲ್ ಹೆಚ್ಚು ದುಬಾರಿಯಾಗಿತ್ತು.
ವ್ಯಾಟ್ ಕುರಿತ ಕೇಜ್ರಿವಾಲ್ ನಿರ್ಧಾರವು ದಿಲ್ಲಿಯ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೆರವಾಗಲಿದೆ. ಕೇಜ್ರಿವಾಲ್ ವರ್ಚುವಲ್ ಪತ್ರಿಕಾಗೋಷ್ಠಿಯ ಮೂಲಕ ವ್ಯಾಟ್ ಕಡಿತದ ವಿಚಾರವನ್ನು ತಿಳಿಸಿದ್ದಾರೆ.
Next Story