ಕೇಂದ್ರದ ಅಂತಿಮ ಗಡುವಿನ ಮೊದಲೆ ಬಂಗ್ಲೆ ಖಾಲಿ ಮಾಡಿದ ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ, ಜು.31: ಕಾಂಗ್ರೆಸ್ನ ಹಿರಿಯ ನಾಯುಕಿ ಪ್ರಿಯಾಂಕಾ ಗಾಂಧಿ ಅವರು ಕೇಂದ್ರ ಸರಕಾರ ನೀಡಿದ್ದ ಅಂತಿಮ ಗಡುವಿನ ಮೊದಲೇ ದಿಲ್ಲಿಯ ಪ್ರತಿಷ್ಟಿತ ಲೋಧಿ ಎಸ್ಟೇಟ್ ಪ್ರದೇಶದಲ್ಲಿರುವ ಸರಕಾರಿ ಬಂಗ್ಲೆಯನ್ನು ಗುರುವಾರ ತೆರವುಗೊಳಿಸಿದ್ದಾರೆ.
ಆಗಸ್ಟ್ 1ಕ್ಕಿಂತ ಮೊದಲು ಬಂಗ್ಲೆ ತೆರವುಗೊಳಿಸಬೇಕು ಇಲ್ಲವೇ ದಂಡ ತೆರಬೇಕಾಗುತ್ತದೆ ಎಂದು ಕೇಂದ್ರ ಸರಕಾರ ಪ್ರಿಯಾಂಕಾ ಗಾಂಧಿಗೆ ನೀಡಿರುವ ನೋಟಿಸ್ನಲ್ಲಿ ತಿಳಿಸಿತ್ತು. ಸೆಂಟ್ರಲ್ ದಿಲ್ಲಿಯಲ್ಲಿರುವ ತನ್ನ ಹೊಸ ಮನೆಗೆ ತೆರಳುವ ಮೊದಲು ಪ್ರಿಯಾಂಕಾ ಗಾಂಧಿ ಅವರು ಗುರ್ಗಾಂವ್ನ ಪೆಂಟ್ ಹೌಸ್ನಲ್ಲಿರುತ್ತಾರೆ ಎಂದು ಮೂಲಗಳು ತಿಳಿಸಿವೆ.
ಪ್ರಿಯಾಂಕಾ ಗಾಂಧಿ 1997ರಿಂದ ಲೋಧಿ ಎಸ್ಟೇಟ್ನಲ್ಲಿ ಬಂಗ್ಲೆಯಲ್ಲಿ ವಾಸವಾಗಿದ್ದರು. ಕೇಂದ್ರ ಸರಕಾರ ವಿಶೇಷ ಭದ್ರತಾ ಪಡೆಯ ಭದ್ರತೆಯನ್ನು ಹಿಂಪಡೆದ ಬಳಿಕ ಬಂಗ್ಲೆಯಲ್ಲಿ ನೆಲೆಸುವ ಅವಕಾಶವೂ ತಪ್ಪಿಹೋಗಿದೆ.
Next Story