ಕಿರುತೆರೆ ನಟ ಸಮೀರ್ ಶರ್ಮಾ ಆತ್ಮಹತ್ಯೆ
ಮುಂಬೈ, ಆ.6: 'ಕಹಾನಿ ಘರ್ ಘರ್ ಕಿ' ಹಾಗೂ 'ಯೇ ರಿಶ್ತೇ ಹೈ ಪ್ಯಾರ್ ಕಿ' ಧಾರಾವಾಹಿಯಲ್ಲಿ ನಟಿಸಿರುವ ನಟ ಸಮೀರ್ ಶರ್ಮಾ(44 ವರ್ಷ) ಮಲಾಡ್ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಬುಧವಾರ ರಾತ್ರಿ ವೇಳಗೆ ಮಲಾಡ್ ಪಶ್ಚಿಮದ ತನ್ನ ಅಪಾರ್ಟ್ಮೆಂಟ್ನ ಕಿಚನ್ ಸೀಲಿಂಗ್ ಫ್ಯಾನ್ಗೆ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಸಮೀರ್ ಶರ್ಮಾ ಪತ್ತೆಯಾಗಿದ್ದರು. ಆಕಸ್ಮಿಕ ಸಾವು ಎಂದು ಕೇಸ್ ದಾಖಲಿಸಿಕೊಳ್ಳಲಾಗಿದೆ. ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರ್ಮಾ ಅವರ ಮೃತದೇಹವನ್ನು ಕಟ್ಟಡದ ವಾಚ್ಮ್ಯಾನ್ ಮೊದಲಿಗೆ ನೋಡಿದ್ದರು.ಮೃತದೇಹವನ್ನು ನೋಡಿದರೆ ಶರ್ಮಾ ಎರಡು ದಿನಗಳ ಹಿಂದೆಯೇ ಸುಸೈಡ್ ಮಾಡಿಕೊಂಡಂತೆ ಕಂಡುಬರುತ್ತಿದೆ. ಸ್ಥಳದಲ್ಲಿ ನಮಗೆ ಡೆತ್ ನೋಟ್ ಲಭಿಸಿಲ್ಲ. ಇದೊಂದು ಸುಸೈಡ್ ಪ್ರಕರಣವಾಗಿ ಕಾಣುತ್ತಿದೆ. ಎರಡು ದಿನಗಳ ಹಿಂದೆ ಶರ್ಮಾ ನೇಣು ಹಾಕಿಕೊಂಡಂತೆ ಕಂಡುಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story