ಕೇರಳ ವಿಮಾನ ದುರಂತ: 2 ವಾರಗಳಲ್ಲಿ ತಂದೆಯಾಗಲಿದ್ದ ಮೃತ ಪೈಲಟ್ ಅಖಿಲೇಶ್ ಶರ್ಮಾ
ಪತಿ ಮೃತಪಟ್ಟ ವಿಷಯ ಗರ್ಭಿಣಿ ಪತ್ನಿಗಿನ್ನೂ ಗೊತ್ತಿಲ್ಲ!
ಹೊಸದಿಲ್ಲಿ: ಕೇರಳದ ಕೋಯಿಕ್ಕೋಡ್ ನಲ್ಲಿ ಅವಘಡಕ್ಕೀಡಾದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಸಹ ಪೈಲಟ್ 32 ವರ್ಷದ ಅಖಿಲೇಶ್ ಶರ್ಮಾ ಮೃತಪಟ್ಟಿದ್ದು, ಅವರ ಪತ್ನಿ ಇನ್ನು 2 ವಾರಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ.
ಅಖಿಲೇಶ್ ಶರ್ಮಾರ ನಿಧನದ ಬಗ್ಗೆ ಪತ್ನಿ ಮೇಘಾ ಅವರಿಗೆ ಕುಟುಂಬಸ್ಥರು ತಿಳಿಸಿಲ್ಲ ಎಂದು ವರದಿಯಾಗಿದೆ. ಅಖಿಲೇಶ್ ಶರ್ಮಾ ಅವರ ಕುಟುಂಬ ಉತ್ತರ ಪ್ರದೇಶದ ಮಥುರಾದ ಗೋವಿಂದ್ ನಗರದಲ್ಲಿ ನೆಲೆಸಿದ್ದಾರೆ.
“ವಿಮಾನ ಪತನವಾದ ಬಳಿಕ ಅಣ್ಣ ಗಂಭೀರ ಸ್ಥಿತಿಯಲ್ಲಿದ್ದಾನೆ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭಿಸಿತ್ತು. ನಂತರ ಶುಕ್ರವಾರ ರಾತ್ರಿ ನಿಧನದ ಬಗ್ಗೆ ಮಾಹಿತಿ ನೀಡಲಾಯಿತು” ಎಂದು ಅವರ ಸಹೋದರ ಲೋಕೇಶ್ ಮಾಹಿತಿ ನೀಡಿದ್ದಾರೆ.
“ನಾವು ಅಖಿಲೇಶ್ ಸಾವಿನ ಬಗ್ಗೆ ಅತ್ತಿಗೆಗೆ ಮಾಹಿತಿ ನೀಡಿಲ್ಲ. ಕೆಲ ದಿನಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ವಿಮಾನ ಅವಘಡದ ಮಾಹಿತಿ ಅವರಿಗೆ ಲಭಿಸಿದೆ” ಎಂದವರು ತಿಳಿಸಿದ್ದಾರೆ.
Next Story