ಖ್ಯಾತ ಉರ್ದು ಕವಿ ರಾಹತ್ ಇಂದೋರಿ ನಿಧನ

ಇಂದೋರ್, ಆ. 11 : ಖ್ಯಾತ ಉರ್ದು ಕವಿ ರಾಹತ್ ಇಂದೋರಿ ಮಧ್ಯ ಪ್ರದೇಶದ ಇಂದೋರ್ ನಲ್ಲಿನ ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ ಕೊರೋನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರವಿವಾರ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಸೋಮವಾರ ರಾಹತ್ ಅವರಿಗೆ ಎರಡು ಬರಿ ಹೃದಯಾಘಾತವಾಗಿತ್ತು ಎಂದು ಆಸ್ಪತ್ರೆಯ ವೈದ್ಯ ಡಾ. ವಿನೋದ್ ಭಂಡಾರಿ ಹೇಳಿದ್ದಾರೆ. 

ಭಾರತದ ಉರ್ದು ಕಾವ್ಯ ಜಗತ್ತಿನ ಅತ್ಯಂತ ಪ್ರಸಿದ್ಧ ಹೆಸರುಗಳಲ್ಲಿ ಒಂದಾಗಿದ್ದ ರಾಹತ್ ಅವರ ಕವಿಗೋಷ್ಠಿಗಳಲ್ಲಿ ಭಾರೀ ಸಂಖ್ಯೆಯ ಜನರು ಸೇರುತ್ತಿದ್ದರು. ಅವರ ಶಾಯರಿಗಳಿಗೆ ದೇಶಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದರು. ಹಲವು ಹಿಂದಿ ಚಿತ್ರಗಳಿಗೂ ಗೀತರಚನೆಕಾರರಾಗಿದ್ದ ರಾಹತ್ ವೃತ್ತಿಯಿಂದ ಪ್ರಾಧ್ಯಾಪಕರಾಗಿದ್ದರು. ಆದರೆ ಕೆಲವು ಹಿಟ್ ಹಿಂದಿ ಚಿತ್ರಗೀತೆಗಳನ್ನು ನೀಡಿದ್ದರೂ ಬಳಿಕ ಅದರಿಂದ ಸಂಪೂರ್ಣ ಹೊರಬಂದು ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದರು.

ದೇಶದಲ್ಲಿರುವ ರಾಜಕೀಯ ಸಾಮಾಜಿಕ ಸ್ಥಿತಿಗತಿಗಳ ಕುರಿತು ಇಂದೋರಿ ಅವರ ಕವನದ ಸಾಲುಗಳು ಭಾರೀ ಚರ್ಚೆಗೆ ಕಾರಣವಾಗುತ್ತಿದ್ದವು. ಕೆಲವು ತಿಂಗಳ ಹಿಂದೆ ಲೋಕಸಭೆಯಲ್ಲಿ  ಕೇಂದ್ರ ಸರಕಾರದ ನೀತಿಗಳ ವಿರುದ್ಧ ಚಾಟಿ ಬೀಸಿ ಮಾತಾಡಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುಆ ಮೊಯಿತ್ರಾ ಅವರು ಇಂದೋರಿ ಅವರ ಬಹಳ ಖ್ಯಾತ ಶಾಯರಿಯ ಸಾಲುಗಳನ್ನು ಉಲ್ಲೇಖಿಸಿದ್ದರು.

ಆ ಸಾಲುಗಳು ಹೀಗಿವೆ...

Agar khilaaf hain hone do jaan thodi hai
ye sab dhuaan hai koi aasmaan thodi hai

Lagegi aag to aayenge ghar kai zad mein
yahan pe sirf hamara makan thodi hai

Main janta hun ki dushman bhi kam nahi lekin
hamari tarah hatheli par jaan thodi hai

Hamare muhn sejo nikale vahi sadakat hai
hamare muhn mein tumhari zubaan thodi hai

Jo aaj sahib-e-masnad hai kal nahin honge
kirayedaar hain jati makan thodi hai

Sabhi ka khoon hai shamil yahan ki mitti main

kisi ke baap ka hindustaan thodi hai

ವಿರೋಧವಿದ್ದರೆ  ಇರಲಿ ಬಿಡಿ, ಜೀವವೇನೂ ಅಲ್ಲವಲ್ಲ 
ಇದೆಲ್ಲಾ ಕೇವಲ ಹೊಗೆ ಮಾತ್ರ, ಆಕಾಶವೇನೂ ಅಲ್ಲ 

ಇಲ್ಲಿ ಬೆಂಕಿ ಬಿದ್ದರೆ ಎಲ್ಲರ ಮನೆಗಳೂ ಸುಡಲಿವೆ
ಇಲ್ಲಿರುವುದು ಕೇವಲ ನಮ್ಮ ಮನೆ ಮಾತ್ರ ಅಲ್ಲವಲ್ಲ  

ಶತ್ರುಗಳೇನು ಕಡಿಮೆಯಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತು
ಆದರೆ ಅವರು ನಮ್ಮ ಹಾಗೆ ಅಂಗೈಯಲ್ಲಿ ಜೀವ ಇಟ್ಟುಕೊಂಡಿಲ್ಲವಲ್ಲ 

ನಮ್ಮ ಬಾಯಿಂದ ಏನು ಹೊರಟಿದೆಯೋ ಅದೇ ಸತ್ಯ 
ನಮ್ಮ ಬಾಯಲ್ಲಿ  ನಿಮ್ಮ ನಾಲಗೆಯಿಲ್ಲವಲ್ಲ 

ಇವತ್ತು ಸಿಂಹಾಸನದಲ್ಲಿರುವವರು ನಾಳೆ ಇರುವುದಿಲ್ಲ
ಕೇವಲ ಬಾಡಿಗೆಗೆ ಇರುವವರು ಅವರು, ಮಾಲಕರೇನಲ್ಲ    

ಇಲ್ಲಿಯ ಮಣ್ಣಲ್ಲಿ ಎಲ್ಲರ ರಕ್ತವಿದೆ
ಹಿಂದುಸ್ತಾನ ಯಾರಪ್ಪನ ಆಸ್ತಿಯೂ ಅಲ್ಲ 

-ಉರ್ದು ಕವಿ  ಡಾ.ರಾಹತ್  ಇಂದೋರಿ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top