ಸಿಎಂ ನಿವಾಸದಲ್ಲಿ ಸಭೆ: ಕೈಕುಲುಕಿದ ಅಶೋಕ್ ಗೆಹ್ಲೋಟ್-ಸಚಿನ್ ಪೈಲಟ್
ಜೈಪುರ: ಬಂಡಾಯದ ನಂತರ ಕಾಂಗ್ರೆಸ್ ಜೊತೆ ರಾಜಿ ಮಾಡಿಕೊಂಡಿರುವ ಸಚಿನ್ ಪೈಲಟ್ ಇಂದು ರಾಜಸ್ಥಾನ ಸಿಎಂ ನಿವಾಸದಲ್ಲಿ ನಡೆದ ಶಾಸಕರ ಸಭೆಯಲ್ಲಿ ಅಶೋಕ್ ಗೆಹ್ಲೋಟ್ ರ ಕೈಕುಲುಕಿದರು.
ಪರಸ್ಪರ ಕೈಕುಲುಕಿದ ಇಬ್ಬರು ನಾಯಕರು ಸಭೆಯಲ್ಲಿ ಜೊತೆಯಾಗಿ ಕುಳಿತರು. ನಾಳೆಯಿಂದ ಆರಂಭವಾಗಲಿರುವ ರಾಜಸ್ಥಾನ ವಿಧಾನಸಭಾ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ.
Next Story