ಬಾಬರಿ ಮಸೀದಿಯಷ್ಟೇ ದೊಡ್ದದಾಗಿರಲಿದೆ ಅಯೋಧ್ಯೆಯ ಮಸೀದಿ
ಲಕ್ನೋ: ಸುಪ್ರೀಂ ಕೋರ್ಟ್ ತೀರ್ಪಿನಂತೆ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಯು ಮೂಲ ಬಾಬರಿ ಮಸೀದಿಯಷ್ಟೇ ದೊಡ್ದದಾಗಿರಲಿದೆ ಎಂದು ಮಸೀದಿ ನಿರ್ಮಾಣಕ್ಕಾಗಿ ರಚಿಸಲಾದ ಟ್ರಸ್ಟಿನ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಮಸೀದಿಗಾಗಿ ಅಯ್ಯೋಧ್ಯೆಯ ಧನ್ನಿಪುರ್ ಗ್ರಾಮದಲ್ಲಿ ಒದಗಿಸಲಾಗಿರುವ ಐದು ಎಕರೆ ಸಂಕೀರ್ಣದಲ್ಲಿ ಒಂದು ಆಸ್ಪತ್ರೆ, ಗ್ರಂಥಾಲಯ ಹಾಗೂ ವಸ್ತು ಸಂಗ್ರಹಾಲಯ ಅಲ್ಲಿನ ಇಂಡೋ-ಇಸ್ಲಾಮಿಕ್ ರಿಸರ್ಚ್ ಸೆಂಟರ್ ಭಾಗವಾಗಲಿವೆ.
ಮಸೀದಿಯು 15,000 ಚದರ ಅಡಿ ವಿಸ್ತೀರ್ಣ ಹೊಂದಲಿದ್ದರೆ ಉಳಿದ ಸ್ಥಳಗಳಲ್ಲಿ ಗ್ರಂಥಾಲಯ, ಆಸ್ಪತ್ರೆ ಹಾಗೂ ವಸ್ತುಸಂಗ್ರಹಾಲಯ ನಿರ್ಮಾಣವಾಗಲಿದೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಕಾರ್ಯದರ್ಶಿ ಮತ್ತು ವಕ್ತಾರರಾದ ಅತ್ತರ್ ಹುಸೈನ್ ತಿಳಿಸಿದ್ದಾರೆ.
ಈ ಯೋಜನೆಗೆ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಪ್ರೊಫೆಸರ್ ಎಸ್ ಎಂ ಅಖ್ತರ್ ಅವರು ಕನ್ಸಲ್ಟೆಂಟ್ ಆರ್ಕಿಟೆಕ್ಟ್ ಆಗಲಿದ್ದಾರೆ.
Next Story