ಲಡಾಖ್: ಭರ್ಚಿ, ರೈಫಲ್ ಗಳನ್ನು ಹಿಡಿದು ನಿಂತಿರುವ ಚೀನಿ ಸೈನಿಕರ ಫೋಟೊ ವೈರಲ್
ಹೊಸದಿಲ್ಲಿ: ಲಡಾಖ್ ನ ಪ್ಯಾಂಗೋಂಗ್ ಸರೋವರದ ಸಮೀಪ ಚೀನಿ ಸೈನಿಕರ ಅತಿಕ್ರಮಣ ಯತ್ನದ ಬಗ್ಗೆ ವರದಿಯಾದ ನಂತರ ಭರ್ಚಿಗಳನ್ನು ಮತ್ತು ಆಟೊಮ್ಯಾಟಿಕ್ ರೈಫಲ್ ಗಳನ್ನು ಹಿಡಿದು ನಿಂತಿರುವ ಚೀನಿ ಸೈನಿಕರ ಫೋಟೊ ವೈರಲ್ ಆಗಿವೆ.
ಜೂನ್ 15ರಂದು ಗಲ್ವಾನ್ ನಲ್ಲಿ ನಡೆದ ಸಂಘರ್ಷದಂತೆಯೇ ಮತ್ತೊಂದು ಹೊಡೆದಾಟಕ್ಕೆ ಚೀನಿ ಸೇನೆ ತಯಾರಿ ನಡೆಸಿತ್ತು ಎಂದು ಈ ಚಿತ್ರಗಳು ಸಾಬೀತುಪಡಿಸಿವೆ ಎಂದು ವರದಿಯಾಗಿದೆ.
ಚಿತ್ರದಲ್ಲಿ ಪ್ರತಿಯೊಬ್ಬ ಚೀನಿ ಸೈನಿಕನ ಕೈಯಲ್ಲೂ ಭರ್ಚಿ ಮತ್ತು ರೈಫಲ್ ಗಳಿವೆ.
Next Story