ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊರೋನ ಸೋಂಕು
ಹೊಸದಿಲ್ಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಗಡ್ಕರಿಯವರೇ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
“ನಿನ್ನೆ ನನಗೆ ಸುಸ್ತಾದಂತೆ ಅನಿಸುತ್ತಿತ್ತು. ಪರೀಕ್ಷೆ ನಡೆಸಿದಾಗ ನನಗೆ ಕೊರೋನ ವೈರಸ್ ತಗಲಿರುವುದು ದೃಢಪಟ್ಟಿದೆ. ನಾನೀಗ ಆರೋಗ್ಯದಿಂದಿದ್ದೇನೆ. ಸ್ವಯಂ ಐಸೊಲೇಶನ್ ಆಗಿದ್ದೇನೆ” ಎಂದವರು ಟ್ವೀಟ್ ಮಾಡಿದ್ದಾರೆ.
Next Story