ಕೊರೋನ ಪ್ರಕರಣ: ದೇಶದಲ್ಲಿ ಒಂದೇ ದಿನ 1.01 ಲಕ್ಷ ಮಂದಿ ಗುಣಮುಖ
ಹೊಸದಿಲ್ಲಿ, ಸೆ.22: ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲೆ 1,01,468 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿ-ಅಂಶದಿಂದ ತಿಳಿದುಬಂದಿದೆ.
75,083 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆಯು 55 ಲಕ್ಷ ಗಡಿ ದಾಟಿದೆ. 1,053 ಸಾವುಗಳು ಸಂಭವಿಸಿದೆ. ಇದೀಗ ನಾಲ್ಕನೇ ದಿನ ದೈನಂದಿನ ಗುಣಮುಖ ಪ್ರಮಾಣವು ದೈನಂದಿನ ಪ್ರಕರಣಗಳಿಗಿಂತ ಹೆಚ್ಚಾಗಿದೆ.
ಕೊರೋನ ಆರ್ಭಟ ಆರಂಭವಾದ ಬಳಿಕ ಸುಮಾರು 45 ಲಕ್ಷ ಜನರು (44,97,868)ಕೋವಿಡ್-19ನಿಂದ ಗುಣಮುಖರಾಗಿದ್ದಾರೆ. ಒಟ್ಟಾರೆ ಚೇತರಿಕೆಯ ದರ ಶೇ.80.86ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳು 9,75,861ಕ್ಕೆ ಕುಸಿದಿದೆ. ಭಾರತದಲ್ಲಿ ಈ ತನಕ 55,62,664 ಕೋವಿಡ್-19 ಕೇಸ್ಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕೋವಿಡ್ಗೆ ಈ ತನಕ ಒಟ್ಟು 88,935 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
Next Story