ಹಿರಿಯ ಮರಾಠಿ ನಟಿ ಆಶಾಲತಾ ಕೋವಿಡ್ ಗೆ ಬಲಿ
ಮುಂಬೈ, ಸೆ.22:ಹಿರಿಯ ನಟಿ ಹಾಗೂ ಮರಾಠಿಯ ರಂಗಭೂಮಿ ಕಲಾವಿದೆ ಆಶಾಲತಾ ವಾಬ್ಗಾಂವ್ಕರ್ ಕೋವಿಡ್-19ನಿಂದಾಗಿ ಮೃತಪಟ್ಟಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
ನಟಿ ರೇಣುಕಾ ಶಹಾನೆ ಟ್ವಿಟರ್ನ ಮೂಲಕ ಆಶಾಲತಾ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಇಂದು ನಮಗೆಲ್ಲರಿಗೂ ದುಃಖದ ದಿನ. ಕೋವಿಡ್-19 ಸುಂದರ ಬದುಕನ್ನು ಕಸಿದುಕೊಂಡಿದೆ. ಆಶಾಲತಾ ತಾಯಿ ಪ್ರೀತಿಯ, ಸೂಕ್ಷ್ಮ ಹಾಗೂ ಶ್ರೇಷ್ಠ ನಟಿಯಾಗಿದ್ದರು ಎಂದು 1980ರಲ್ಲಿ ಅಪ್ನೆ ಪರಾಯೆ ಚಿತ್ರದಲ್ಲಿ ಆಶಾಲತಾರೊದಿಗೆ ನಟಿಸಿದ್ದ ಶಬನಾ ಆಝ್ಮಿ ಟ್ವೀಟ್ ಮಾಡಿದ್ದಾರೆ.
ಗೋವಾದ ಮಾಜಿ ಸಿಎಂ ದಿಗಂಬರ ಕಾಮತ್ ಕೂಡ ಆಶಾಲತಾ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು.
Next Story