ದಿಲ್ಲಿ ಉಪಮುಖ್ಯಮಂತ್ರಿ ಸಿಸೋಡಿಯಾಗೆ ಕೊರೋನ ಜೊತೆಗೆ ಡೆಂಗಿ
ಹೊಸದಿಲ್ಲಿ, ಸೆ.24: ನಿನ್ನೆ ಆಸ್ಪತ್ರೆಗೆ ದಾಖಲಾಗಿರುವ ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಕೊರೋನ ಮಾತ್ರವಲ್ಲ ಡೆಂಗಿಯಿಂದಲೂ ಬಳಲುತ್ತಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ..
ಸಿಸೋಡಿಯಾ ಅವರು ಬುಧವಾರ ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದಾಗಿ ನಗರದ ಲೋಕನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಅವರ ಬ್ಲಡ್ ಪ್ಲೇಟ್ ಲೆಟ್ ಗಳ ಮಟ್ಟ ಕುಸಿದಿದೆ ಎಂದು ವೈದ್ಯರು ತಿಳಿಸಿದ್ದಾರೆ...
ಸೆಪ್ಟಂಬರ್ 14ರಂದು ಕೊರೋನ ಸೋಂಕುದೃಢಪಟ್ಟ ಬಳಿಕ ಸಿಸೋಡಿಯಾ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಸ್ವಯಂ ಐಸೋಲೇಶನ್ ನಲ್ಲಿ ಇದ್ದರು.
Next Story