ಹತ್ರಸ್ ಗ್ಯಾಂಗ್ ರೇಪ್ ಘಟನೆ ಬೆನ್ನಲ್ಲೇ ಮತ್ತೊಬ್ಬ ದಲಿತ ಮಹಿಳೆಯ ಅಪಹರಣ
ಲಕ್ನೋ: 19 ವರ್ಷ ವಯಸ್ಸಿನ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಘಟನೆಯ ಬೆನ್ನಲ್ಲೇ ಉತ್ತರ ಪ್ರದೇಶದ ಹತ್ರಸ್ ಪಟ್ಟಣದಲ್ಲಿ ಮತ್ತೊಬ್ಬ ದಲಿತ ಮಹಿಳೆಯನ್ನು ಅಪಹರಿಸಲಾಗಿದೆ.
ಟೆಂಪೊವೊಂದರಲ್ಲಿ ಮಹಿಳೆ ತನ್ನ ತಾಯಿ ಜತೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅಪಹರಿಸಲಾಗಿದೆ. ಪಟ್ಟಣಕ್ಕೆ ಔಷಧಿ ಖರೀದಿಗಾಗಿ ಬಂದಿದ್ದ ಮಹಿಳೆ ಹಾಗೂ ಆಕೆಯ ತಾಯಿ ಟೆಂಪೋದಲ್ಲಿ ಮನೆಗೆ ಮರಳುತ್ತಿದ್ದಾಗ ಸದಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಯ ರಸ್ತೆಯಲ್ಲಿ ಘಟನೆ ನಡೆದಿದೆ.
ಪ್ರಯಾಣದ ವೇಳೆ ಅಸ್ವಸ್ಥತೆಯಿಂದ ಮಹಿಳೆ ವಾಂತಿ ಮಾಡಿಕೊಳ್ಳಲಾರಂಭಿಸಿದರು. ಆಗ ತಾಯಿ ನೀರು ತರುವ ಸಲುವಾಗಿ ಕೆಳಕ್ಕೆ ಇಳಿದಾಗ ಟೆಂಪೋ ಚಾಲಕ ಮತ್ತು ಇತರ ಇಬ್ಬರು ಮಹಿಳೆಯನ್ನು ಅಪಹರಿಸಿದ್ದಾರೆ. ಅದೇ ವಾಹನದಲ್ಲಿ ಮಹಿಳೆಯನ್ನು ಅಪಹರಿಸಲಾಗಿದೆ. ತಾಯಿ ಸಂಬಂಧಿಕರಿಗೆ ವಿಷಯ ತಲುಪಿಸಿದ ತಕ್ಷಣ ಪೊಲೀಸರಿಗೂ ಮಾಹಿತಿ ನೀಡಲಾಯಿತು. ಮಹಿಳೆಯ ಕುಟುಂಬ ನೀಡಿದ ದೂರಿನ ಮೇರೆಗೆ ಅಪಹರಣ ಪ್ರಕರಣ ದಾಖಲಿಸಲಾಗಿದೆ.
Next Story