ಉತ್ತರಪ್ರದೇಶ: ಮಹಿಳೆಯ ಅರೆಬೆಂದ ಶವ ರೈಲ್ವೆ ಹಳಿಯಲ್ಲಿ ಪತ್ತೆ
ಸಾಂದರ್ಭಿಕ ಚಿತ್ರ
ಮುಝಾಫ್ಫರ್ನಗರ, ಅ.1: ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಕಾಂದ್ಲಾ ಪಟ್ಟಣದ ರೈಲ್ವೆ ಹಳಿಯಲ್ಲಿ ಮಹಿಳೆಯೊಬ್ಬರ ಮೃತದೇಹವೊಂದು ಅರೆಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ಮಹಿಳೆಯನ್ನು ಸತ್ಬೀರಿ ಎಂದು ಗುರುತಿಸಲಾಗಿದೆ. ಮಂಗಳವಾರದಿಂದ ಆಕೆ ನಾಪತ್ತೆಯಾಗಿದ್ದಾಗಿ ಮಹಿಳೆಯ ಪುತ್ರ ಬಲರಾಮ್ ತಿಳಿಸಿದ್ದಾರೆ.
ಮಹಿಳೆಯ ಶವವು ಬುಧವಾರ ಸಂಜೆ ಪತ್ತೆಯಾಗಿದ್ದು, ಅದನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆಯೆಂದು ಹಿರಿಯ ಠಾಣಾಧಿಕಾರಿ ಕರಮ್ವೀರ್ ಸಿಂಗ್ ತಿಳಿಸಿದ್ದಾರೆ. ಈ ಘಟನೆಯ ಹಿಂದಿರುವವರು ಮಹಿಳೆಯ ದೇಹವನ್ನು ಸುಡುವ ಮೂಲಕ ಆಕೆಯ ಗುರುತನ್ನು ಮರೆಮಾಚಲು ಯತ್ನಿಸಿದ್ದಾರೆಂದು ಅವರು ಹೇಳಿದ್ದಾರೆ.
Next Story