ಕೇರಳ: ತಂದೆಯಾದ 12 ವರ್ಷದ ಬಾಲಕ !
ಎರ್ಣಾಕುಲಂ, ಮಾ.23: ಎರ್ಣಾಕುಲಂ ನಗರದ ಆಸ್ಪತ್ರೆಯೊಂದರಲ್ಲಿ ಕೆಲ ತಿಂಗಳುಗಳ ಹಿಂದೆ 16 ವರ್ಷದ ಬಾಲಕಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಆ ಮಗುವಿನ ತಂದೆ 12 ವರ್ಷದ ಬಾಲಕನೆಂದು ತಿಳಿದು ಎಲ್ಲರೂ ಹುಬ್ಬೇರುವಂತಾಗಿದೆ. ಈ ಬಾಲಕ ಭಾರತದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ತಂದೆಯೆಂದು ನಂಬಲಾಗಿದೆ.
ಪೊಕ್ಸೊ ಕಾಯಿದೆಯನ್ವಯ ಮಗುವಿನ ತಾಯಿ ತಂದೆಯರ ಗುರುತನ್ನು ರಹಸ್ಯವಾಗಿಡಲಾಗಿದೆ. ಮಗು ಹಾಗೂ ಅದರ ತಂದೆಯೆಂದು ತಿಳಿಯಲಾದ ಬಾಲಕನ ಜೆನೆಟಿಕ್ ಪ್ರೊಫೈಲಿಂಗನ್ನು ವೈದ್ಯರು ನಡೆಸಿದ್ದು ಇದರ ಫಲಿತಾಂಶದಂತೆ ಬಾಲಕನೇ ಆ ಮಗುವಿನ ತಂದೆಯೆಂದು ಸಾಬೀತಾಗಿದೆ.
ಬಾಲಕನಿಗೆ ಅತ್ಯಂತ ವಿರಳ ವೈದ್ಯಕೀಯ ಸ್ಥಿತಿ ‘ಪ್ರಿಕೋಶಿಯಸ್ ಪ್ಯುಬರ್ಟಿ’ ಅಂದರೆ ಆತ ವಯಸ್ಸಿಗಿಂತ ಮೊದಲೇ ವಯಸ್ಕ ಅಥವಾ ಪ್ರಬುದ್ಧನಾಗಿದ್ದಾನೆ, ಎಂದು ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಡಾ ಪಿ ಕೆ ಜಬ್ಬಾರ್ ಹೇಳುತ್ತಾರೆ.
ಬಾಲಕನ ವಿರುದ್ಧ ಪೊಕ್ಸೊ ಕಾಯಿದೆಯನ್ವಯ ಈಗಾಗಲೇ ಪ್ರಕರಣ ದಾಖಲಾಗಿದೆ
Next Story