ಗುಜರಾತ್ನಲ್ಲಿ ಮೋದಿ ಸ್ವಾಗತಕ್ಕೆ 11ಕಿ.ಮೀ. ಉದ್ದದ ಸೀರೆ
ಹೊಸದಿಲ್ಲಿ, ಎ. 16: ಗುಜರಾತ್ನಲ್ಲಿ ಎರಡುದಿವಸಗಳ ಸಂದರ್ಶನಕ್ಕೆ ಬರಲಿರುವ ಪ್ರಧಾನಿ ನರೇಂದ್ರ ಮೋದಿಯ ಸ್ವಾಗತಕ್ಕೆ ದಾರಿ ಬದಿಯಲ್ಲಿ 11 ಕಿ.ಮೀ. ಉದ್ದದ ಬಟ್ಟೆಯಿಂದ (ಸೀರೆ) ಅಲಂಕರಿಸಲಾಗಿದೆ.
ಮೋದಿ ಸರಕಾರದ ಜನಕಲ್ಯಾಣ ಯೋಜನೆಗಳನ್ನು ಸೀರೆಯಲ್ಲಿ ಚಿತ್ರಿಸಲಾಗಿದೆ. ವಿಮಾನ ನಿಲ್ದಾಣದಿಂದ ಮೋದಿ ತಂಗಲಿರುವ ಸರ್ಕ್ಯುಟ್ ಹೌಸ್ ವರೆಗೆ ದಾರಿಬದಿಯಲ್ಲಿ ಈ ಸೀರೆ ಮೋದಿಯನ್ನು ಸ್ವಾಗತಿಸಲಿಕ್ಕಿದೆ.
ಸೂರತ್ನಲ್ಲಿ ರವಿವಾರ ಸಂಜೆಯಿಂದ ಮೋದಿಯ ರೋಡ್ ಶೋದೊಂದಿಗೆ ಮೋದಿಯ ಗುಜರಾತ್ ಭೇಟಿ ಆರಂಭವಾಗುತ್ತಿದೆ. 400 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿದ “ಕಿರಣ್ ಮಲ್ಟಿ ಸೂಪರ್ ಸ್ಪೆಶಾಲಿಟಿ” ಆಸ್ಪತ್ರೆಯನ್ನು ಸೋಮವಾರ ಮೋದಿ ಉದ್ಘಾಟಿಸಲಿದ್ದಾರೆ. ನಂತರ ವಿವಿಧ ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
Next Story