ಹಳಿತಪ್ಪಿದ ಔರಂಗಾಬಾದ್ -ಹೈದರಾಬಾದ್ ರೈಲು
ಬೆಂಗಳೂರು, ಎ.21: ಔರಂಗಾಬಾದ್ ನಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಪ್ರಯಾಣಿಕರ ರೈಲು ಬಾಲ್ಕಿ ತಾಲೂಕಿನ ಸಂಗಮ್ ಮತ್ತು ಕಲ್ಗಾಪುರ ಗ್ರಾಮಗಳ ಮಧ್ಯೆ ಇಂದು ಬೆಳಗ್ಗೆ ಹಳಿ ತಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ರೈಲಿನ ಎಂಜಿನ್, ಮತ್ತು ಎರಡು ಬೋಗಿಗಳು ರೈಲು ಹಳಿಯನ್ನು ಬಿಟ್ಟು ಹತ್ತಿರದ ಹೊಲಕ್ಕೆ ಇಳಿದಿದೆ.
ಗಾಯಗೊಂಡ ಇಬ್ಬರನ್ನು ಬಾಲ್ಕಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.
Next Story