ಭಾರತದ 101ರ ಹರೆಯದ ಕೌರ್ ಗೆ 100ಮೀ ಓಟದಲ್ಲಿ ಚಿನ್ನ
ಆಕ್ಲೆಂಡ್, ಎ.24: ಭಾರತದ 101ರ ಹರೆಯದ ಮಹಿಳಾ ಅಥ್ಲೀಟ್ ಮನ್ ಕೌರ್ ನ್ಯೂಝಿಲೆಂಡ್ ನ ಆಕ್ಲೆಂಡ್ ನಲ್ಲಿ ಸೋಮವಾರ ನಡೆದ ವರ್ಲ್ಡ್ ಮಾಸ್ಟರ್ಸ್ ಗೇಮ್ಸ್ ನ ಶತಾಯುಷಿ ಅಥ್ಲೀಟ್ ಗಳ ವಿಭಾಗದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದಾರೆ.
ಕೌರ್ 1 ನಿಮಿಷ ಮತ್ತು 14 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಮತ್ತೊಮ್ಮೆ ಚಿನ್ನ ಗೆದ್ದುಕೊಂಡಿದ್ದಾರೆ. ಈ ವಿಭಾಗದಲ್ಲಿ ಇದ್ದ ಏಕೈಕ ಸ್ಪರ್ಧಿ ಕೌರ್ ಚಿನ್ನ ಜಯಿಸಿ ತನ್ನ ವೃತ್ತಿ ಬದುಕಿನಲ್ಲಿ ಪಡೆದಿರುವ ಪದಕಗಳ ಸಂಖ್ಯೆಯನ್ನು 17ಕ್ಕೆ ಏರಿಸಿದ್ದಾರೆ.
ಕೌರ್ 8 ವರ್ಷಗಳ ಹಿಂದೆ ಮಗನ ಸಲಹೆಯಂತೆ ಅಥ್ಲೆಟಿಕ್ಸ್ ಪ್ರವೇಶಿಸಿದ್ದರು. ಆಗ ಅವರ ವಯಸ್ಸು 93 ಆಗಿತ್ತು.
Next Story