ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆ; ಬಿಜೆಪಿ ಭರ್ಜರಿ ಮುನ್ನಡೆ
ಹೊಸದಿಲ್ಲಿ, ಎ.26: ತೀವ್ರ ಕುತೂಹಲ ಕೆರಳಿಸಿರುವ ದಿಲ್ಲಿಯ ಮೂರು ಮಹಾನಗರ ಪಾಲಿಕೆಗಳ 270 ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಬುಧವಾರ ಬೆಳಗ್ಗೆ ಆರಂಭಗೊಂಡಿದ್ದು, ಬಿಜೆಪಿ ಭರ್ಜರಿ ಮೇಲುಗೈ ಸಾಧಿಸಿದೆ. ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯುತ್ತ ಹೆಜ್ಜೆ ಇರಿಸಿದೆ,.
ಎರಡನೆ ಸ್ಥಾನಕ್ಕಾಗಿ ಕಾಂಗ್ರೆಸ್ ಹಾಗೂ ಆಪ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಮುನ್ನಡೆ......
ಒಟ್ಟು 270 ಸ್ಥಾನಗಳ ಪೈಕಿ ಬಿಜೆಪಿ 180, ಕಾಂಗ್ರೆಸ್ 36, ಆಪ್ 43 ಇತರ ಪಕ್ಷಗಳು 11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ..
ಉತ್ತರ ದಿಲ್ಲಿ:103 ಕ್ಷೇತ್ರಗಳಲ್ಲಿ ಬಿಜೆಪಿ 71, ಕಾಂಗ್ರೆಸ್ 13, ಆಪ್ 76, ಇತರ 3
ದಕ್ಷಿಣ ದಿಲ್ಲಿ:104 ಕ್ಷೇತ್ರಗಳಲ್ಲಿ ಬಿಜೆಪಿ 70, ಕಾಂಗ್ರೆಸ್ 12, ಆಪ್ 17, ಇತರ 5
ಪೂರ್ವ ದಿಲ್ಲಿ: 63 ಕ್ಷೇತ್ರಗಳಲ್ಲಿ ಬಿಜೆಪಿ 41, ಕಾಂಗ್ರೆಸ್ 10, ಆಪ್ 9, ಇತರ 3
ಒಟ್ಟು 35 ಕೇಂದ್ರಗಳಲ್ಲಿ ಮತಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಉತ್ತರ ದಿಲ್ಲಿಯಲ್ಲಿ 16, ದಕ್ಷಿಣ ದಿಲ್ಲಿಯಲ್ಲಿ 13 ಹಾಗೂ ಪೂರ್ವ ದಿಲ್ಲಿ 6 ಕೇಂದ್ರಗಳಲ್ಲಿ ಮತಎಣಿಕೆ ನಡೆಯುತ್ತಿದೆ.