ಹೈದರಾಬಾದನ್ನು ಮಿನಿ ಪಾಕಿಸ್ತಾನ ಎಂದು ಬಣ್ಣಿಸಿದ ಬಿಜೆಪಿ ಶಾಸಕ
ಹೈದರಾಬಾದ್, ಮೇ 14: ಹಳೆಯ ಹೈದರಾಬಾದ್ ನಗರವನ್ನು ‘ಮಿನಿ ಪಾಕಿಸ್ತಾನ’ ಎಂದು ಬಣ್ಣಿಸಿದ ಜೊತೆಗೆ, ಇತರ ಕೆಲವು ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿಜೆಪಿ ಶಾಸಕ ರಾಜಾ ಸಿಂಗ್ ಲೋಧ್ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತೆಲಂಗಾಣ ರಾಜ್ಯ ವಿಧಾನಸಭೆಯಲ್ಲಿ ಗೋಶಮಹಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಿಂಗ್ ಟಿವಿ ಚಾನೆಲ್ ಜೊತೆ ಮಾತನಾಡುತ್ತಾ , ಸಂವಿಧಾನ ಮತ್ತು ಹಾಲಿ ಇರುವ ಕಾನೂನಿನ ಬಗ್ಗೆ ತಾನು ಆದ್ಯತೆ ನೀಡುತ್ತಿಲ್ಲ. ತನಗಾಗಿ ಖಾಸಗಿ ಸೇನೆಯೊಂದನ್ನು ರಚಿಸಿಕೊಂಡು ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲು ಸಿದ್ದತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಹಳೆಯ ಹೈದರಾಬಾದ್ ನಗರವನ್ನು ಮಿನಿ ಪಾಕಿಸ್ತಾನ ಎಂದು ಬಣ್ಣಿಸಿದ್ದಾರೆ.
ಸಿಂಗ್ ಸಂದರ್ಶನದಲ್ಲಿ ಹೇಳಿದ ಕೆಲವು ಮಾತುಗಳು ಪ್ರಚೋದನಕಾರಿಯಾಗಿದ್ದವು, ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story