ಬಸ್ - ಲಾರಿ ಢಿಕ್ಕಿ, ಮೂವರ ಸಾವು
ಬಠಿಂಡಾ(ಪಂಜಾಬ್),ಮೇ 21: ಇಲ್ಲಿಯ ರಾಮಪುರ ಪ್ರದೇಶದ ಜೆಥುಕೆ ಗ್ರಾಮ ದಲ್ಲಿ ರವಿವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಮಿನಿಲಾರಿಯೊಂದಕ್ಕೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಇತರ 25 ಜನರು ಗಾಯಗೊಂಡಿದ್ದಾರೆ.
ಬಸ್ ಲುಧಿಯಾನಕ್ಕೆ ಸಾಗುತ್ತಿದ್ದು, ಲಾರಿ ವಿರುದ್ಧ ದಿಕ್ಕಿನಿಂದ ಬರುತ್ತಿತ್ತು. ಅಪಘಾತ ದಿಂದಾಗಿ ಎರಡೂ ವಾಹನಗಳು ನಜ್ಜುಗುಜ್ಜಾಗಿವೆ. ಗಾಯಾಳುಗಳನ್ನು ಸ್ಥಳೀಯ ಮತ್ತು ಬರ್ನಾಲಾದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
Next Story