ಭಾರೀ ಬೆಂಕಿ ಅವಘಡ: 60 ಅಂಗಡಿಗಳು ಭಸ್ಮ, 1 ಕೋಟಿ ರೂ. ನಷ್ಟ
ಹೊಸದಿಲ್ಲಿ, ಮೇ 23: ಭಾರೀ ಬೆಂಕಿ ಅವಘಡ ಸಂಭವಿಸಿ 60 ಅಂಗಡಿಗಳು ನಾಶಗೊಂಡು 1 ಕೋಟಿ ರೂ. ನಷ್ಟ ಸಂಭವಿಸಿದ ಘಟನೆ ಚಾಂದ್ ನಿ ಚೌಕ್ ನ ಕಾತ್ರಾ ಧುಲಿಯಾ ಮಾರುಕಟ್ಟೆಯಲ್ಲಿ ನಡೆದಿದೆ.
ಸೋಮವಾರ ರಾತ್ರಿ ಬೆಂಕಿ ಅವಘಡದ ಬಗ್ಗೆ ಮಾಹಿತಿ ಸಿಕ್ಕಿದ್ದು, ತಕ್ಷಣ 29 ಅಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಕೈಗೊಂಡಿತ್ತು. ಘಟನೆಯಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ. ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ.
Next Story