ವಾಹ್, ಜಿಯೊ ಪಾನಿಪುರಿ: 100ರೂ.ಗೆ ಅನ್ಲಿಮಿಟೆಡ್ ತಿನ್ನಿರಿ
ಗಾಂಧಿನಗರ್, ಮೇ 23: 100ರೂಪಾಯಿಗಳಿಗೆ ದಿನವಿಡಿ ಅನ್ ಲಿಮಿಟೆಡ್ ಪಾನಿಪುರಿ ತಿನ್ನಬಹುದು. 1000ರೂಪಾಯಿಗಳಿಗೆ ಒಂದುತಿಂಗಳು ಪಾನಿಪುರಿ ತಿನ್ನಬಹುದು. ಜಿಯೊ 4ಜಿ ಪ್ಲಾನ್ನ ಸ್ಪೂರ್ತಿಯಲ್ಲಿ ಗುಜರಾತ್ನ ಪಾನಿ ಪುರಿ ವ್ಯಾಪಾರಿ ಜಿಯೊಪ್ಲಾನ್ನಂತೆ ಪಾನಿಪುರಿ ವ್ಯಾಪಾರಕ್ಕಿಳಿದಿದ್ದಾನೆ.
ಫೋರ್ಬಂದರ್ನ ರವಿ ಜಗದಂಬ ಎನ್ನುವ ಬೀದಿ ಬದಿ ವ್ಯಾಪಾರಿ ಪಾನಿಪುರಿ ವ್ಯಾಪಾರದಲ್ಲಿ ಜಿಯೊ ದಿವಸ್ ಪ್ಲಾನ್ ,ತಿಂಗಳ ಪ್ಲಾನ್ಗಳನ್ನು ಮಾಡಿದ್ದಾನೆ.
100ರೂಪಾಯಿಗಳ ದಿವಸ ಪ್ಲಾನ್ ತೆಗೆಯುವುದಾದರೆ, ಒಂದು ದಿವಸ ಇಡೀ ಇಷ್ಟವಿರುವಷ್ಟು ಪಾನಿಪುರಿ ತಿನ್ನಬಹುದು. 1000ರೂಪಾಯಿಗಳ ಪ್ಲಾನ್ ತೆಗೆಯುವುದಾದರೆ ಒಂದು ತಿಂಗಳಿಡೀ ತಿನ್ನಬಹುದು. ಪಾನಿಪುರಿ ಮಾತ್ರವಲ್ಲ ಭೇಲ್ಪುರಿಯಂತಹ ಚಾಟ್ ಆಹಾರಗಳನ್ನು ಸೇವಿಸಬಹುದು. ಜಿಯೊ 4ಜಿಯ ಹೆಜ್ಜೆಯಲ್ಲೇ ಆರಂಭಿಸಿದ ವ್ಯಾಪಾರ ಕೂಡಾ ಕ್ಲಿಕ್ಕಾಗಿದೆ.ಬೇಡಿಕೆ ಹೆಚ್ಚಾದ್ದರಿಂದ ಬೇರೆ ಕಡೆಗಳಲ್ಲಿ ಕೂಡಾ ಸ್ಟಾಲ್ಗಳನ್ನು ತೆರೆಯುವ ಕುರಿತು ರವಿ ಚಿಂತಿಸುತ್ತಿದ್ದಾರೆ.
Next Story