ಪಂಜಾಬ್ನ ಮಾಜಿ ಡಿಜಿಪಿ ಕೆಪಿಎಸ್ ಗಿಲ್ ನಿಧನ
ಹೊಸದಿಲ್ಲಿ, ಮೇ 26: ಪಂಜಾಬ್ನ ಮಾಜಿ ಪೊಲೀಸ್ ಮಹಾನಿರ್ದೇಶಕ ಕನ್ವರ್ ಪಾಲ್ ಸಿಂಗ್(ಕೆಪಿಎಸ್) ಗಿಲ್ ದಿಲ್ಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಇಂದು ನಿಧನರಾದರು.ಅವರಿಗೆ 82 ವರ್ಷವಾಗಿತ್ತು.
ಕಿಡ್ನಿ ವೈಫಲ್ಯ ಮತ್ತು ಹೃದಯಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಗಿಲ್ ಹೃದಯಾಘಾತದಿಂದ ನಿಧನರಾದರು ಎಂದು ವರದಿಯಾಗಿದೆ.ಪಂಜಾಬ್ನಲ್ಲಿ ಡಿಜಿಪಿಯಾಗಿದ್ದ ಅವಧಿಯಲ್ಲಿ ರಾಷ್ಟ್ರವಿರೋಧಿ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿದ್ದ ಗಿಲ್, 1995ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ಭಾರತೀಯ ಹಾಕಿ ಸಂಘಟನೆ ಮತ್ತು ಸಂಘರ್ಷ ನಿರ್ವಹಣಾ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದ ಇವರಿಗೆ 1989ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು.
Next Story