ಗಣಿಗಾರಿಕೆ ಪ್ರದೇಶದಲ್ಲಿ ಸ್ಫೋಟ: 6 ಮಂದಿ ಮೃತ್ಯು
ಆಂಧ್ರಪ್ರದೇಶ, ಮೇ 27: ಗಣಿಗಾರಿಕೆ ಸಂದರ್ಭ ಸ್ಫೋಟ ಸಂಭವಿಸಿ 6 ಮಂದಿ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರದ ಗೊಲ್ಲಪಲೆಮ್ ನ ಫಿರಂಗಿಪುರಂನಲ್ಲಿ ನಡೆದಿದೆ.
ಗಣಿಗಾರಿಕೆ ಸಂದರ್ಭ ಅಕ್ರಮವಾಗಿ ಸ್ಫೋಟ ಮಾಡಲಾಗಿತ್ತು. ಇದಕ್ಕೆ ಯಾವುದೇ ಅನುಮತಿ ಇರಲಿಲ್ಲ ಎನ್ನಲಾಗಿದೆ. ಸ್ಪೋಟದ ತೀವ್ರತೆಗೆ ಬುಲ್ಡೋಝರ್ ಗಳು ಮೈಮೇಲೆ ಬಿದ್ದ ಪರಿಣಾಮ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story