ಉತ್ತರ ಪ್ರದೇಶ: ಬೌದ್ಧ ಧರ್ಮಕ್ಕೆ ಮತಾಂತರಗೊಂಡ 150 ದಲಿತರು
ಉತ್ತರಪ್ರದೇಶ, ಮೇ 27: “ಬುದ್ಧ ಪೂರ್ಣಿಮಾ ಆಚರಣೆಯ ಸಂದರ್ಭ ಸುಮಾರು 150 ದಲಿತರು ಬೌದ್ಧಧರ್ಮಕ್ಕೆ ಮತಾಂತರವಾಗಿದ್ದಾರೆ” ಎಂದು ಭಾರತೀಯ ಬೌದ್ಧ ಧಮ್ಮ ದರ್ಶನಸಾರ್ ಸೊಸೈಟಿ ಹಾಗೂ ರಿಸರ್ಚ್ ಸೆಂಟರ್ ನ ಜ್ಞಾನೇಂದ್ರ ಮೌರ್ಯ ಹೇಳಿದ್ದಾರೆ.
ಘನತೆ ಹಾಗೂ ಗೌರವದ ರಕ್ಷಣೆಗಾಗಿ ದಲಿತರು ಮತಾಂತರವಾಗಿದ್ದಾರೆ. ಇನ್ನೂ ನೂರಾರು ದಲಿತರು ಬೌದ್ಧ ಧರ್ಮಕ್ಕೆ ಮತಾಂತರವಾಗಲು ಇಚ್ಛಿಸುತ್ತಿದ್ದು, ಆದರೆ ಅದನ್ನೀಗ ಬಹಿರಂಗಪಡಿಸುತ್ತಿಲ್ಲ ಎಂದವರು ಹೇಳಿದ್ದಾರೆ,
ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದ್ದು, ಅಂತಹ ದೀಕ್ಷಾ ಕಾರ್ಯಕ್ರಮಗಳು ನಡೆದಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪಿಂಕಿ ಜೋವಲ್ ಹೇಳಿದ್ದಾರೆ.
Next Story