ಗಾಯಕ ಅಭಿಜಿತ್ರ ನೂತನ ಟ್ವಿಟರ್ ಖಾತೆ ಕೂಡಾ ಬಂದ್!
ಮುಂಬೈ,ಮೇ 30: ಸರಣಿ ವಿವಾದಾತ್ಮಕ ಟ್ವೀಟ್ಗಳನ್ನು ಪ್ರಸಾರ ಮಾಡಿದ್ದ ಗಾಯಕ ಅಭಿಜಿತ್ ಭಟ್ಟಾಚಾರ್ಯ ಅವರ ಹೊಸ ಖಾತೆಯನ್ನು ಕೂಡಾ ಸಾಮಾಜಿಕ ಜಾಲತಾಣ ಟ್ವಿಟರ್ ಅಮಾನತಿನಲ್ಲಿರಿಸಿದೆ.
ಮಹಿಳೆಯರ ವಿರುದ್ಧ ನಿಂದನಾತ್ಮಕ ಟ್ವೀಟ್ಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಅಭಿಜಿತ್ ಅವರ ಅಧಿಕೃತ ಖಾತೆಯನ್ನು ಕಳೆದ ವಾರ ಟ್ವಿಟರ್ ಅಮಾನತುಗೊಳಿಸಿತ್ತು. ರವಿವಾರ ಅಭಿಜಿತ್ ಹೊಸ ಟ್ವಿಟರ್ ಖಾತೆಯನ್ನು ಆರಂಭಿಸಿದ್ದರು. ತನ್ನ ನೂತನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದ 58 ವರ್ಷದ ಅಭಿಜಿತ್, ತಾನು ರಾಷ್ಟ್ರದ್ರೋಹಿಗಳನ್ನು ವಿರೋಧಿಸುತ್ತೇನೆ ಎಂದಿದ್ದರು.
‘‘ ಇದು ನನ್ನ ಟ್ವಿಟ್ಟರ್ ಖಾತೆ. ನನ್ನ ದೃಢೀಕೃತ ಖಾತೆಯು ಸಕ್ರಿಯವಾಗುವ ತನಕ ಈ ಟ್ವಿಟರ್ ಖಾತೆಯನ್ನು ಅನುಸರಿಸಿ. ನನ್ನ ಹೆಸರಲ್ಲಿರುವ ಇತರ ಎಲ್ಲಾ ಖಾತೆಗಳು ನಕಲಿಯಾಗಿದ್ದು, ಅವು ನನ್ನ ವರ್ಚಸ್ಸಿಗೆ ಕಳಂಕ ತರಲು ಯತ್ನಿಸುತ್ತಿವೆ’’ ಎಂದವರು ಟ್ವೀಟ್ ಮಾಡಿದ್ದರು. ಆದರೆ ರವಿವಾರ ಸಂಜೆಯ ವೇಳೆಗೆ ಅವರ ಹೊಸ ಖಾತೆಯನ್ನೂ ಕೂಡಾ ಅಮಾನತುಗೊಳಿಸಲಾಗಿದೆ.
Next Story