“ಬೀಫ್ ಸೇವನೆ ನಮ್ಮ ಸಂಸ್ಕೃತಿ” ಎಂದು ಪಕ್ಷಕ್ಕೆ ರಾಜೀನಾಮೆ ನೀಡಿದ ಬಿಜೆಪಿ ನಾಯಕ
ಮೇಘಾಲಯ, ಜೂ.6: ಕೇಂದ್ರ ಸರಕಾರದ ಬೀಫ್ ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದೊಳಗೇ ಭಿನ್ನಮತ ಭುಗಿಲೆದ್ದಿದ್ದು, ಮೇಘಾಲಯದ ವೆಸ್ಟ್ ಗಾರೋ ಹಿಲ್ಸ್ ಜಿಲ್ಲಾಧ್ಯಕ್ಷ ಬರ್ನಾರ್ಡ್ ಮಾರ್ಕ್ ಪಕ್ಷ ತೊರೆದ ಬೆನ್ನಲ್ಲೇ ಇದೀಗ ಉತ್ತರ ಗಾರೋ ಜಿಲ್ಲಾಧ್ಯಕ್ಷ ಬಾಚು ಮಾರಕ್ ರಾಜೀನಾಮೆ ನೀಡಿದ್ದಾರೆ.
“ಗಾರೋಗಳ (ಮೇಘಾಲಯದ ಜನರು) ಭಾವನೆಯೊಂದಿಗೆ ರಾಜಿ ಮಾಡಿಕೊಳ್ಳಲು ನಾನು ತಯಾರಿಲ್ಲ. ನನ್ನ ಸಮುದಾಯದ ಜನರ ಭಾವನೆಗಳನ್ನು ಕಾಪಾಡುವುದು ನನ್ನ ಕರ್ತವ್ಯವಾಗಿದೆ. ಬೀಫ್ ಸೇವನೆ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯವಾಗಿದೆ. ಬೀಫ್ ಗೆ ನಿಷೇಧ ಹೇರುವ ಬಿಜೆಪಿಯ ಜಾತ್ಯಾತೀತ ವಿರೋಧಿ ಧೋರಣೆ ಸರಿಯಲ್ಲ” ಎಂದು ಬಾಚು ಹೇಳಿದ್ದಾರೆ.
ಈ ಬಗೆಗಿನ ರಾಜೀನಾಮೆ ಪತ್ರವನ್ನು ಪಕ್ಷದ ರಾಜ್ಯಾಧ್ಯಕ್ಷ ಶಿಬುನ್ ಲಿಂಗ್ಡೋರಿಗೆ ನೀಡಿದ್ದಾರೆ.
Next Story